ಚನ್ನಗಿರಿ: ವ್ಯಕ್ತಿಯೊಬ್ಬ ಕೈಯಲ್ಲಿ ಹರಿತವಾದ ಮಚ್ಚನ್ನು ಹಿಡಿದು ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳನ್ನು ತಡೆದು ಚಾಲಕರನ್ನು ಹೆದರಿಸಿದ ಘಟನೆ ತಾಲ್ಲೂಕಿನ ಮರವಂಜಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಅದೇ ಗ್ರಾಮದ ಕಾರ್ತಿಕ್ ಪುಂಡಾಟ ಮೆರೆದಿದ್ದು, ಕಾರು, ಬಸ್ಸು, ಲಾರಿ ಹಾಗೂ ಇನ್ನಿತರ ವಾಹನಗಳನ್ನು ತಡೆದು ಚಾಲಕರಿಗೆ ತೊಂದರೆ ನೀಡಿದ್ದಾನೆ. ಕೌಟುಂಬಿಕ ಜಗಳದ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡುವುದಾಗಿ ಹೇಳಿಕೊಂಡು ಕೈಯಲ್ಲಿ ಮಚ್ಚು ಹಿಡಿದು ರಾಜ್ಯ ಹೆದ್ದಾರಿಗೆ ಬಂದಿದ್ದಾನೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಚಾಲಕರಿಗೆ ತೊಂದರೆ ನೀಡಿದ್ದಾನೆ ಎಂದು ಚನ್ನಗಿರಿ ಪೊಲೀಸ್ ಠಾಣೆಯ ಸಿಪಿಐ ಕೆ.ಎನ್. ರವೀಶ್ ತಿಳಿಸಿದ್ದಾರೆ. ಕಾರ್ತಿಕ್ ಪುಂಡಾಟವನ್ನು ನೋಡುತ್ತಿದ್ದ ಯಾರೊಬ್ಬರೂ ತಡೆಯಲು ಮುಂದಾಗಿಲ್ಲ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

