ಹುಬ್ಬಳ್ಳಿ: ಹಿಂದೂ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅಂದಿನ ದೃಶ್ಯಾವಳಿ ಸೆರೆ ಹಿಡಿದಿದ್ದ ಡ್ಯಾಪ್ಸನ್ ಹೆಲ್ತ್ ಕೇರ್ ಇನ್ಶೂರೆನ್ಸ್ ಕಂಪನಿಯ ಸೀನಿಯರ್ ಅಕೌಂಟ್ ರಿಸೀವರ್ ಅಸೋಸಿಯೇಟ್ ನವನಗರದ ಅಬ್ದುಲ್ ಮಲಿಕ್ ಶೇಖ್‌ನನ್ನು ಇಲ್ಲಿಯ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ಖಾಸಗಿ ಹೋಟೆಲ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದುಕೊಂಡಿದ್ದ. ಯುವತಿ ಕೈಗೆ ಮೊಬೈಲ್ ಪೋನ್ ಸಿಕ್ಕಾಗಿ ಈ ವಿಷಯ ಗೊತ್ತಾಗಿದೆ. ಕೂಡಲೇ ಯುವತಿ ಪ್ರಕರಣ ದಾಖಲಿಸಿದ್ದಳು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಅಬ್ದುಲ್ ಮಲಿಕ್ ಶೇಖ್‌ನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

