ಮೈಸೂರು : ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿರುವ ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯದಲ್ಲೇ ಪ್ರಕಟ ಮಾಡಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಬಂದಿದ್ದರಿಂದ ವರದಿ ಪ್ರಕಟ ಮುಂದಕ್ಕೆ ಹೋಗಿದೆ.
ವರದಿ ಪ್ರಕಟಕ್ಕೆ ಸಿದ್ದರಾಮಯ್ಯ ಅವರು ಒಲವು ತೋರಿದ್ದಾರೆ ಎಂದರು.
ಜಾತಿಗಣತಿ ಜಾರಿಯಾಗಬೇಕಾ? ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾವ ಸಮುದಾಯ ಹೆಚ್ಚಿದೆ, ಯಾವ ಸಮುದಾಯ ಕಡಿಮೆ ಇದೆ ಎನ್ನುವ ಮಾಹಿತಿ ಸರಕಾರ ನಡೆಸುವಾಗ ಬೇಕಾ ಬೇಡ್ವಾ? ಎಂದು ಪ್ರಶ್ನಿಸಿದರು.
ರಾಷ್ಟ್ರದಲ್ಲಿಯೇ ರಾಹುಲ್ ಗಾಂಧಿಯವರು ಜಾತಿಗಣತಿ ಜಾರಿ ಬಗ್ಗೆ ಮಾತಾಡಿದ್ದಾರೆ. ಕೇಂದ್ರದಲ್ಲಿ ನಮ್ಮ ಸರಕಾರ ಬಂದರೆ ಜಾರಿಗೆ ತರುವುದಾಗಿಯೂ ಹೇಳಿದ್ದಾರೆ. ಅನುಷ್ಠಾನದ ವೇಳೆ ಬಿಜೆಪಿ ಮತ್ತು ವಿಪಕ್ಷ ನಾಯಕರ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





