ರಾಮನಗರ: ವ್ಯಕ್ತಿಯೊಬ್ಬರಿಗೆ ಆರ್‌ಟಿಒ ಚಲನ್ ಹೆಸರಿನ ಎಪಿಕೆ ಆಯಪ್ ಲಿಂಕ್ ಅನ್ನು ವಾಟ್ಸ್‌ಆಯಪ್‌ಗೆ ಕಳುಹಿಸಿ, ಲಿಂಕ್ ತೆರೆಯುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ 3 ಲಕ್ಷ ರೂ. ಹಣವನ್ನು ಸೈಬರ್‌ವಂಚಕರು ಡ್ರಾ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸೈಯ್ಯದ್ ಮುಬಾರಕ್ ಎಂಬುವರ ವಾಟ್ಸ್‌ಆಯಪ್ ಸಂಖ್ಯೆಗೆ ಸೈಬರ್‌ವಂಚಕರು ಎಪಿಕೆ ಲಿಂಕ್ ಕಳುಹಿಸಿದ್ದಾರೆ. ಲಿಂಕ್‌ಮೇಲೆ ಕ್ಲಿಕ್ ಮಾಡಿ ಆಯಪ್ ಅನ್ನು ಡೌನ್‌ಲೌಡ್ ಮಾಡುತ್ತಿದ್ದಂತೆ ವಂಚಕರು ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಡ್ರಾ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸೈಯ್ಯದ್ ರಾಮನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

