Breaking News

ಗಾಂಜಾ ಸೇವನೆ: ಯುವಕನ ವಿರುದ್ಧ ಪ್ರಕರಣ

ಬೀರೂರು (ಕಡೂರು): ಗಾಂಜಾ ಸೇವಿಸಿ ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ. ಬೀರೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದ ನಿವಾಸಿ, ಚಾಲಕ ಆಕೀಬ್ ಅಹಮದ್ (23) ಆರೋಪಿ. ಬೀರೂರು ಪೊಲೀಸರು ಸೋಮವಾರ ಪಟ್ಟಣದಲ್ಲಿ ಗಸ್ತು ನಡೆಸುವ ಸಂದರ್ಭ ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ, ಆತನನ್ನು ಬೀರೂರಿನ ಸಾರ್ವ ಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಕೀಬ್ ಅಹಮದ್ ಗಾಂಜಾ ಸೇವನೆ ಮಾಡಿದ್ದಾನೆ ಎಂದು ವೈದ್ಯಾಧಿಕಾರಿ ವರದಿ ನೀಡಿದ್ದಾರೆ. ಆತನ ವಿರುದ್ಧ ಬೀರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಕುಷ್ಟಗಿಯಲ್ಲಿ ಘೋರ ದುರಂತ: ಮೂವರು ಮಕ್ಕಳಿಗೆ ವಿಷ ಕುಡಿಸಿ ತಂದೆಯೂ ಆತ್ಮಹತ್ಯೆಗೆ ಯತ್ನ!

ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮದ್ಯವ್ಯಸನಿ ತಂದೆಯೊಬ್ಬ ತನ್ನ 10, 8 ಮತ್ತು 5 ವರ್ಷದ ಮೂವರು ಮಕ್ಕಳಿಗೆ ವಿಷ …

Leave a Reply

Your email address will not be published. Required fields are marked *