ಯುವತಿಗೆ ನಶೆ ಬರುವ ಔಷದಿ ಕೊಟ್ಟು, ಮಧ್ಯ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ ಮುಪ್ತಿಯನ್ನು ಹಳೆ ಹುಬ್ಬಳ್ಳಿಯ ಪಿ ಎಸ್ ಐ ರುದ್ರಪ್ಪ ಗುಡದಾರ ಮತ್ತು ಟೀಮ್ ಬಂಧನ ಮಾಡಿ ಠಾಣೆಗೆ ಕರೆ ತಂದಿದ್ದಾರೆ.ತನ್ನ ಹೆಂಡತಿಗೆ ವಿಚ್ಚೆದನ ನೀಡಿದ್ದೇನೆ ಎಂದು ಹೇಳಿ ಯುವತಿಯನ್ನು ಬಳಸಿಕೊಂಡು ಅತ್ಯಾಚಾರ ವೆಸಗಿದ ಮೌಲ್ವಿ.ಯುವತಿಯೊಬ್ಬಳಿಗೆ ನಶೆ ಬರುವ ಔಷದಿ ಕೊಟ್ಟು ಅತ್ಯಾಚಾರ ಎಸಗಿದ, ದೇಶದ ಖ್ಯಾತ ಮುಪ್ತಿ ಗುಲಾಮ ಜಿಹಾನಿ ಅಜಹರಿ ಮಧ್ಯ ಪ್ರದೇಶದಲ್ಲಿ ಅಡಗಿ ಕೂತಿದ್ದ, ಮುಪ್ತಿಯನ್ನು ಹಳೆ ಹುಬ್ಬಳ್ಳಿ ಪೊಲೀಸರು ಅರೆಸ್ಟ ಮಾಡಿ ತಂದಿದ್ದಾರೆ. ಮದರಾಸದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ ಮುಲದ ಯುವತಿಗೆ ನಶೆ ಬರುವ ಔಷದಿ ಕೊಟ್ಟು ಬಲಾತ್ಕಾರ ಎಸಗಿದ್ದ ಆರೋಪದಡಿಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಯುವತಿ ಎರಡೂ ವರ್ಷದ ಅವಧಿಯಲ್ಲಿ ಗುಲಾಮ ಜಿಲಾನಿ ಅಜಹರಿ ಒಟ್ಟು ನಾಲ್ಕು ಬಾರಿ ಗರ್ಭಪಾತ ಮಾಡಿಸಿದ್ದಾನೆಂದು ದೂರಿನಲ್ಲಿ ಉಲ್ಲೆಕಿಸಿದ್ದಾರೆ.ಅತ್ಯಾಚಾರ ಆರೋಪಿ ಮುಪ್ತಿ ಗುಲಾಮ ಜಿಲಾನಿ ಅಜಹರಿಯನ್ನು ಮಧ್ಯಪ್ರದೇಶದಿಂದ ಬಂಧಿಸಿ ಕರೆತಂದ ಹಳೆ ಹುಬ್ಬಳ್ಳಿ ಪೊಲೀಸರು.ಇನ್ಸಪೆಕ್ಟರ್ ಸುರೇಶ ಯಳ್ಳೂರ ಮಾರ್ಗದರ್ಶನದಲ್ಲಿ ಪಿ ಎಸ್ ಐ ರುದ್ರಪ್ಪ & ಟೀಮ್ ಭರ್ಜರಿ ಕಾರ್ಯಾಚರಣೆ ನಡೆಸಿ, ಆರೋಪಿ ಮುಪ್ತಿ ಗುಲಾಮ್ ಜಿಲಾನಿ ಅಜಹರಿಯನ್ನು ಅರೆಸ್ಟ ಮಾಡಿ ವೈದ್ಯಕೀಯ ಪರೀಕ್ಷೆಗೋಳಪಾಡಾಸಿದ್ದಾರೆ.ಇಂದು ಸಂಜೆಯ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿರುವ ಪೊಲೀಸರು, ಸದ್ಯ ಹಳೆ ಹುಬ್ಬಳ್ಳಿ ಪೊಲೀಸರಿಂದ ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.
Check Also
ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ
ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …
bigtvnews | Hubli Dharwad News | Kannada News | Karnataka News Hubli News | News In Hubli | Local news

