Breaking News

ಸಾಧು ವೇಷದಲ್ಲಿ ಬಂದು ಸಮ್ಮೋಹನ: ಅಂಗಡಿ ಮಾಲೀಕರಿಂದ ಹಣ, ಚಿನ್ನ ದೋಚಿದ ಖದೀಮರು

ಸಿಂಧನೂರು ನಗರದಲ್ಲಿ ಸಾಧು-ಸಂತರ ವೇಷದಲ್ಲಿ ಬಂದ ಖದೀಮರ ಗ್ಯಾಂಗ್, ಅಂಗಡಿ ಮಾಲೀಕರನ್ನು ಸಮ್ಮೋಹನಗೊಳಿಸಿ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ನಗರದ ಸಾಯಿ ಮೆಡಿಕಲ್ಸ್ ಅಂಗಡಿಗೆ ಬಂದ ಸಾಧುವೊಬ್ಬನು ಬಿಸಿಲಿನಿಂದ ಬಳಲಿದ್ದೇನೆ ಎಂದು ಹೇಳಿ ನೀರು ಕೇಳಿದ್ದಾನೆ. ಅಂಗಡಿ ಮಾಲೀಕ ವಿಷ್ಣುದತ್ತು ಅವರು ಮಾನವೀಯತೆಯಿಂದ ತಣ್ಣನೆಯ ನೀರು ಕೊಟ್ಟಿದ್ದಾರೆ. ನಂತರ ಸಾಧು ಆಶೀರ್ವಾದ ಮಾಡುವ ನಾಟಕವಾಡಿ, ಎರಡು ಹೂವುಗಳು ಮತ್ತು ಒಂದು ಪೊಟ್ಟಣವನ್ನು ನೀಡಿದ್ದಾರೆ. ಹೂವಿನ ವಾಸನೆ ತಗುಲಿದ ಕೆಲವೇ ಕ್ಷಣಗಳಲ್ಲಿ ವಿಷ್ಣುದತ್ತು ಅವರಿಗೆ ಮಂಕು ಬಡಿದಂತಾಗಿ, ತಮ್ಮ ಅರಿವಿಲ್ಲದೆ ಜೇಬಿನಲ್ಲಿದ್ದ ₹10 ಸಾವಿರ ನಗದು ಹಾಗೂ ಕೈಯಲ್ಲಿದ್ದ ಬಂಗಾರದ ಉಂಗುರವನ್ನು ಸಾಧುವಿನ ಕೈಗೆ ನೀಡಿದ್ದಾರೆ. ಹಣ ಮತ್ತು ಚಿನ್ನ ಪಡೆದುಕೊಂಡ ಖದೀಮ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ಬಳಿಕ ಪ್ರಜ್ಞೆಗೆ ಬಂದ ಮಾಲೀಕರಿಗೆ ತಾವು ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನಗರದಲ್ಲಿ ಸಾಧುಗಳ ವೇಷದಲ್ಲಿ ಓಡಾಡುತ್ತಿದ್ದ ಗ್ಯಾಂಗ್ ಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *