Breaking News

ಕೂಡಲ ಸಂಗಮ ದೇವಸ್ಥಾನದ ಆಸ್ತಿ ಕಬಳಿಕೆಗೆ ಸಂಚು : ಡಾ.ಚನ್ನಬಸವಾನಂದ ಸ್ವಾಮೀಜಿ


ಹುಬ್ಬಳ್ಳಿ: ಕೂಡಲ ಸಂಗಮ ಬಸವ ಧರ್ಮ ಪೀಠದ ಸಾವಿರಾರು ಕೋಟಿ ಆಸ್ತಿಗಾಗಿ ಮತ್ತು ಧರ್ಮದ ಹೆಸರಿನಲ್ಲಿ ಹಣ ಮಾಡಲು ಬೀದರಿನ ಬಸವರಾಜ ಧನ್ನೂರ ಹಾಗೂ ಅವರ ಸಂಗಡಿಗರು ಸಂಸ್ಥೆಯ ಅಧ್ಯಕ್ಷರಾದ ಮಾತೆ ಗಂಗಾ ದೇವಿಯವರ ಹಾಗೂ ಇನ್ನುಳಿದ ಜಂಗಮ ಮೂರ್ತಿಗಳ ನಡುವೆ ದ್ವೇಷ ವೈಷಮ್ಯ ಮೂಡಿಸಿ ಸಂಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಶ್ರಿಚನ್ನಬಸವೇಶ್ವರ ಜ್ಞಾನ ಪೀಠದ ಪೀಠಾಧ್ಯಕ್ಷ ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗೈಕ್ಯ ಮಾತೆ ಮಹಾದೇವಿಯವರು ಕೂಡಲ ಸಂಗಮ, ಬೆಂಗಳೂರು, ಧಾರವಾಡ ಹಾಗೂ ಮಹಾರಾಷ್ಟ್ರದ ಅಲ್ಲಮಗಿರಿ, ದೆಹಲಿ, ಹೈದ್ರಾಬಾದ್ ಮತ್ತು ಊಟಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಆಶ್ರಮಗಳನ್ನು ನಿರ್ಮಿಸಿದ್ದಾರೆ. ಈ ಆಶ್ರಮಗಳ ಒಡೆಯ ತಾನೇ ಆಗಬೇಕೆಂದು ದನ್ನೂರ ಎಂಬಾತ 20-30 ವರ್ಷಗಳಿಂದ ಧರ್ಮ ಪ್ರಚಾರ ಮಾಡುತ್ತಾ ಸಂಸ್ಥೆಗಾಗಿ, ತ್ಯಾಗದಿಂದ ದುಡಿಯುತ್ತಿರುವ ನನ್ನಂತಹ ಸೇವಕರಿಗೆ ಕಿರುಕುಳ ನೀಡಿ, ಹೊರಹಾಕುತ್ತಿದ್ದಾನೆ ಎಂದರು.

Share News

About BigTv News

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *