ಡ್ರೋನ್ ದಾಳಿಯಿಂದಾಗಿ ಅಬುದಾಭಿಯಲ್ಲಿರುವ ಅಣುಸ್ಥಾವರದ ಸಮೀಪ ಬೆಂಕಿ ಕಾಣಿಸಿಕೊಂಡಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಸೋಸಿಯೇಟ್ ಪ್ರೆಸ್ ವರದಿ ಮಾಡಿದೆ. ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್ ಅಲ್ ಧ್ರಫ್ರಾದಲ್ಲಿರುವ ಬರಕ ಅಣುಸ್ಥಾವರದ ಸಮೀಪ ಇರುವ ಹೊರಾಂಗಣ ವಿದ್ಯುತ್ ಜನರೇಟರ್ ಬಳಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಕಿರಣ ಸೋರಿಕೆಯ ಅಪಾಯವಿಲ್ಲ ಎಂದೂ ಅದು ತಿಳಿಸಿದೆ. ಅಮೆರಿಕ ಹಾಗೂ ಇರಾನ್ ನಡುವಿನ ಕದನ ವಿರಾಮ ಜಾರಿಯಲ್ಲಿರುವಾಗಲೇ ಈ ದಾಳಿ ನಡೆದಿದೆ. ಕದನ ವಿರಾಮ ಜಾರಿಯಲ್ಲಿದ್ದರೂ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

