Breaking News

ತೆಂಗೆಮ್ಮ ಜಾತ್ರಾಮಹೋತ್ಸವ ಹಿನ್ನೆಲೆ:ಭಾವೈಕ್ಯತೆ ಮೆರೆದ ಮುಸ್ಲಿಂ ಸಮುದಾಯ!

ಹುಬ್ಬಳ್ಳಿ : ತಾಲೂಕಿನ ಕುಸುಗಲ್ಲ ಗ್ರಾಮದಲ್ಲಿ ಶ್ರೀ ತಂಗೆಮ್ಮ ದೇವಿ ರಥೋತ್ಸವ ಹಿನ್ನೆಲೆಯಲ್ಲಿ ಬಂದ ಭಕ್ತರಿಗೆ ಮುಸ್ಲಿಂ ಸಮುದಾಯ ಸಿಹಿ ಹಾಗೂ ತಂಪು ಪಾನೀಯಗಳನ್ನು ನೀಡಿ ಸತ್ಕಾರ ಮಾಡಿದರು. ತಂಗೆಮ್ಮ ದೇವಿ ಮತ್ತು ಅಕ್ಕಮ್ಮದೇವಿ ಜಾತ್ರೆ ನಿಮಿತ್ತ ಪಂಚಾಮೃತ ಅಭಿಷೇಕ , ವಿಶೇಷ 7 ಪೂಜೆ ನೆರವೇರಿಸಲಾಗುತ್ತದೆ.

ಹಿನ್ನೆಲೆಯಲ್ಲಿ ಸುಮಾರು ವರ್ಷಗಳಿಂದ ಹಿಂದೂ ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ತೆಂಗೆಮ್ಮನ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದು ಈ ವರ್ಷವೂ ಸಹ ಬಂದ ಭಕ್ತರಿಗೆ ಮುಸ್ಲಿಂ ಮುಖಂಡರ ನೇತೃತ್ವದಲ್ಲಿ ಸಿಹಿ ಹಾಗೂ ತಂಪು ಪಾನಿಯ ನೀಡಿ ಹಿಂದೂ ಮುಸ್ಲಿಂ ನಾವೆಲ್ಲರೂ ಒಂದೇ ಎಂದು ಸಾರಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶಕೀರಾ ಭಾನು,ಉಪಾಧ್ಯಕ್ಷ ನೀಲವ್ವ ಡಾಲಾಯತರ,ಶಾಣವಾಜ,ರಹೀಮ ಕಮಡೊಳ್ಳಿ,ಹುಸೇನಸಾಬ,ಶೌಕತಲಿ,ರೈಮನಸಾಬ ಕವಳಿಕಾಯಿ,ಸೈಯದಸಾಬ,ಬುಡ್ಡೆಸಾಬ ನವಲಗುಂದ, ಸೇರಿದಂತೆ ಇತರರಿದ್ದರು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *