ಬೆಂಗಳೂರು: ಜ್ಯುವೆಲ್ಲರಿ ಶಾಪ್‌ನ ಶೌಚಾಲಯದ ಕಿಟಕಿಯಿಂದ ಒಳನುಗ್ಗಿ ಚಿನ್ನಾಭರಣ ತಯಾರಿಸಲು ಸಂಗ್ರಹಿಸಿಟ್ಟಿದ್ದ 24 ಕ್ಯಾರೆಟ್‌ನ ಚಿನ್ನದ ಗಟ್ಟಿಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ನಿವಾಸಿ ಅರ್ಜುನ್ (28), ರಾಕಿ (26) ಮತ್ತು ನಾಗರಾಜು (26) ಬಂಧಿತರು. ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ 84 ಗ್ರಾಂ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ. ಮೇ 6 ರಂದು ಆರೋಪಿಗಳು ನಗರತ್ ಪೇಟೆ ಮುಖ್ಯರಸ್ತೆಯಲ್ಲಿರುವ ಜ್ಯೂವೆಲ್ಲರಿ ಶಾಪ್‌ನ ಶೌಚಾಲಯದ ಕಿಟಕಿಯಿಂದ ಅಂಗಡಿಗೆ ನುಗ್ಗಿ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದರು. ನಗರ್ತಪೇಟೆ ಮುಖ್ಯರಸ್ತೆಯಲ್ಲಿ ಮೆಹದಿ ಹಸನ್ ಎಂಬುವರು ಜ್ಯೂವೆಲ್ಲರಿ ಅಂಗಡಿಯನ್ನು ಇಟ್ಟುಕೊಂಡು ಚಿನ್ನದ ರಿಫೈನರಿ ಕೆಲಸ ಮಾಡುತ್ತಾರೆ. ಮೇ 6ರಂದು ರಾತ್ರಿ ಕಂಪನಿಯ ಕಟ್ಟಡದ 5ನೇ ಮಹಡಿಯ ಶೌಚಾಲಯದ ಕಿಟಕಿಯಿಂದ ಕಳ್ಳರು ಒಳನುಗ್ಗಿ ಚಿನ್ನದ ಗಟ್ಟಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಮೆಹದಿ ಹಸನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಶ್ರೀರಾಂಪುರದ ಸನ್‌ರೈಸ್ ಸರ್ಕಲ್ ಬಳಿ ಮೂವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

