ತುಮಕೂರು: ಈ ಬಾರಿಯ ಮುಂಗಾರು ಮಳೆ ಸರಿಯಾಗಿ ಆಗದಿರುವ ಹಾಗೂ ಬೋರ್ ವೆಲ್ ನಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.ರಂಗನಾಥ್(೫೫) ಸಾವನ್ನಪ್ಪಿರುವ ರೈತ.ಘಟನೆ ಹಿನ್ನಲೆ: ಮಧುಗಿರಿ ತಾಲೂಕಿನ ಹೊಸಹಳ್ಳಿಯ ರೈತ ರಂಗನಾಥ ಕೃಷಿ ಕಾರ್ಯಕ್ಕಾಗಿಹೊಲದಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದರು. ಆದರೆ ಬಾವಿಯಲ್ಲಿ ನೀರು ಸಿಗದೆ ವಿಫಲವಾಗಿದ್ದವು.ಒಂದು ಕಡೆ ಮುಂಗಾರು ಮಳೆ ಕೈಕೊಟ್ಟಿದ್ದು, ಮತ್ತೊಂದೆಡೆ ಬೋರ್ ವೆಲೆ ಕೂಡ ಕೈಕೊಟ್ಟ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ರಂಗನಾಥ ಆತಂಕಕ್ಕೆ ಒಳಗಾಗಿದ್ದರು.ಸಾಲಗಾರರ ಕಾಟ: ೩ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ ರೈತ ರಂಗನಾಥ ಕೃಷಿಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದ. ಪ್ರತಿನಿತ್ಯ ಸಾಲ ಕೊಟ್ಟವರು ಹಣ ಕೇಳುವದರಿಂದ ಕಿರಿಕಿರಿಯಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರವದಾಗಿ ತಿಳಿದು ಬಂದಿದೆ.ಮಧುಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





