Breaking News

ಹೋಲ್‌ಸೇಲ್‌ ನೆಪ: 3 ಕೋಟಿ ರೂ. ಚಿನ್ನ ದೋಚಿ ಪರಾರಿ

ಬೆಂಗಳೂರು: ಹೋಲ್‌ಸೇಲ್‌ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ ಜ್ಯುವೆಲ್ಲರಿ ಶಾಪ್‌ ಸಿಬ್ಬಂದಿಗೆ ವಂಚಿಸಿ 3 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಮೂವರ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಪೇಟೆಯ ಮಹೇಂದ್ರ ಕುಮಾರ್‌ ಡಿ.ಜೈನ್‌ ದೂರಿನ ಮೇರೆಗೆ ಮಲ್ಲೇಶ್ವರದ ಪರೇಶ್‌ ಸೋನಿ, ಚಂದ್ರಶೇಖರ್‌ ಮತ್ತು ಶ್ಯಾಮ್‌ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು 1 ಕೆ.ಜಿ. 850 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದೂರುದಾರ ಮಹೇಂದ್ರ ಕುಮಾರ್‌ಜೈನ್‌ ನಗರ್ತಪೇಟೆ‌ ಮೆಹ್ತಾ ಗೋಲ್ಡ್ ಪ್ರೈ ಲಿಮಿಟೆಡ್‌ನ‌ಲ್ಲಿ ಸೇಲ್ಸ್‌ ಮ್ಯಾನೇಜರ್‌ ಆಗ್ತಿದ್ದಾರೆ. ಮೇ 16ರಂದು ಮಲ್ಲೇಶ್ವರದ ಮಾಹಿ ಎಂಟರ್‌ಪ್ರೈಸಸ್‌ ಸಂಸ್ಥೆಯ ಮಾಲೀಕ ಪರೇಶ್‌ ಸೋನಿ ತಮ್ಮ ಸಂಸ್ಥೆಗೆ ಹೋಲ್‌ಸೇಲ್‌ ದರದಲ್ಲಿ ಭಾರಿ ಪ್ರಮಾಣದ ಚಿನ್ನದ ಆಭರಣಗಳು ಬೇಕಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಚಿನ್ನಾಭರಣಗಳ ಮಾದರಿಯನ್ನು ತೋರಿಸುವಂತೆ ಸೂಚಿಸಿದ್ದಾರೆ. ಅದರಂತೆ ಮಹೇಂದ್ರ ಕುಮಾರ್‌ಜೈನ್‌ ಇತರರು ಅವರ ಕಚೇರಿಗೆ ಹೋಗಿದ್ದಾಗ ಆರೋಪಿಗಳು ಚಿನ್ನಾಭರಣಗಳ ಮಾದರಿ ನೋಡಿ, ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಚಿನ್ನಾಭರಣ ಕೊಂಡೊಯ್ದು ನಾಪತ್ತೆಯಾಗಿದ್ದಾರೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *