ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಎಂ.ಬಿ.ಜ್ಯುವೆಲ್ಲರಿ ಮಳಿಗೆಯ ಹಿಂಭಾಗದ ಗೋಡೆ ಕೊರೆದು, 70 ಕೆ.ಜಿ. ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಸುರೇಶ್, ಧನರಾಮ್, ನೇಮಿಚಂದ್ರ ಬಂಧಿತರು.ಆರೋಪಿಗಳಿಂದ 29 ಕೆ.ಜಿ. ಬೆಳ್ಳಿ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಮಹೇಂದ್ರ ತಲೆಮರೆಸಿಕೊಂಡಿದ್ದಾನೆ. ಕೆ.ಮಹೇಂದ್ರ ಕುಮಾರ್ ಚಿನ್ನಾಭರಣ ಅಂಗಡಿ ನಡೆಸುತ್ತಿದ್ದು ಮಳಿಗೆಗೆ ಹೊಂದಿ ಕೊಂಡಂತೆ ಸೆರಾಮಿಕ್ಸ್ ಗೋದಾಮು ಇದೆ. ಏ.27ರಂದು ಮಳಿಗೆ ಹಿಂಬದಿಯ ಗೋಡೆ ಕೊರೆದ ಆರೋಪಿಗಳು ಒಳ ಪ್ರವೇಶಿಸಿದ್ದರು. ಅಲ್ಲದೇ 70 ಕೆ.ಜಿ. ಬೆಳ್ಳಿ ಆಭರಣ, 5 ಲಕ್ಷ ರೂ. ನಗದು ಸೇರಿ 1.20 ಕೋಟಿ ರೂ. ವಸ್ತು ಕಳವು ಮಾಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

