ಹುಬ್ಬಳ್ಳಿ: ಮೊಬೈಲ್ ಕೊಡಿಸದಿದ್ದಕ್ಕೆ ಜತೆಗಿದ್ದ ಕಾರ್ಮಿಕನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಅಜೀಂ ಜಮಖಾನೆ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದವನಾಗಿದ್ದ ಆರೋಪಿ ಅಜೀಂ, ಕಟ್ಟಡ ಕಾರ್ಮಿಕನಾಗಿ ಮೃತ ದಾದಾಪೀರ್ ಜೊತೆ ಕೆಲಸ ಮಾಡಿಕೊಂಡಿದ್ದನು. ದಾದಾಪೀರ್ ಜೊತೆಗೆ ಕೆಲಸಕ್ಕೆ ಹೋಗಿದ್ದ ಅಜೀಂಗೆ ವಿಪರೀತ ಮೊಬೈಲ್ ಹುಚ್ಚಿತ್ತು, ಹೀಗಾಗಿ ನನಗೊಂದು ಮೊಬೈಲ್ ಕೊಡಿಸುವಂತೆ ಪಟ್ಟು ಹಿಡಿದಿದ್ದನು. ಆದರೆ ದಾದಾಪೀರ್ ಆತನಿಗೆ ಕೊಡಿಸಿರಲಿಲ್ಲ, ಈ ಹಿಂದೆ ಕೊಟ್ಟಿದ್ದ 25 ಸಾವಿರ ಹಣವನ್ನೇ ವಾಪಸ್ ಕೊಟ್ಟಿಲ್ಲ, ಕೆಲಸಕ್ಕೂ ಸರಿಯಾಗಿ ಬರೋದಿಲ್ಲ ಅಂತೇಳಿ ಬೈದು ಮೊಬೈಲ್ ಕೊಡಿಸಲ್ಲ ಅಂತ ಹೇಳಿದ್ದಾನೆ. ಮೊಬೈಲ್ ಕೊಡಿಸಲ್ಲ ಅಂತಾ ಅಂದಿದ್ದಕ್ಕೆ ರೊಚ್ಚಿಗೆದ್ದು ಅಜೀಂ, ದಾದಪೀರ್ ತಲೆಗೆ ಕಬ್ಬಿಣದ ರಾಡ್‌ನಿಂದ ತಲೆ ಒಡೆದು ಅಟ್ಟಹಾಸ ಮೆರೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ದಾದಾಪೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಯಾವಾಗ ದಾದಾಪೀರನ ಹೆಣ ಬಿತ್ತೋ ಅಜೀಂ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

