Breaking News

ಕೆಂಪುಕೋಟೆ ಬಳಿ ಕಾರು ಸ್ಫೋಟಿಸಿದ್ದವರು ಸರಣಿ ದಾಳಿಗೆ ಯೋಜಿಸಿದ್ದರು: NIA ವರದಿ

ದೆಹಲಿ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಭಯಾನಕ ಮಾಹಿತಿಯೊಂದು ಬಹಿರಂಗವಾಗಿದೆ. ಪ್ರಮುಖ ಆರೋಪಿಗಳಾದ ಡಾ. ಮುಜಮ್ಮಿಲ್ ಶಕೀಲ್ ಹಾಗೂ ಡಾ. ಶಾಹೀನ್ ಸಯೀದ್ ಲಖನೌನ ವಿಧಾನಸಭೆ, ಬಾಪು ಭವನ, ಇಮಾಂಬರಾ, ಲಾಲ್ ಬಾಗ್ ಮತ್ತು ಅಮೀನಾಬಾದ್ ಸೇರಿ ಜನಸಂದಣಿ ಪ್ರದೇಶಗಳಲ್ಲಿ ಸರಣಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ. 2025ರ ಆಗಸ್ಟ್ 25ರಿಂದ 30ರವರೆಗೆ ಫರಿದಾಬಾದ್‌ನಿಂದ ಲಖನೌವರೆಗೆ ರಹಸ್ಯವಾಗಿ ಸಂಚರಿಸಿ, ಸ್ಫೋಟಕ ತುಂಬಿದ ಕಾರುಗಳನ್ನು ನಿಲ್ಲಿಸಿ ಸ್ಫೋಟಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಸ್ಫೋಟಕ ತಯಾರಿಕೆಗೆ ಬೇಕಾದ ರಾಸಾಯನಿಕಗಳಿಗಾಗಿ ಮುಜಮ್ಮಿಲ್ ತನ್ನ ಮೊಬೈಲ್‌ನಲ್ಲಿ ಲಖನೌನ ಕೆಮಿಕಲ್ ಅಂಗಡಿಗಳ ಮಾಹಿತಿ ಹುಡುಕಾಟ ನಡೆಸಿದ್ದನು. ಶಾಹೀನ್ ಆ ಅಂಗಡಿಗಳ ಪಟ್ಟಿಯನ್ನು ಕೈಬರಹದಲ್ಲಿ ಬರೆದುಿಟ್ಟಿದ್ದಳು ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಇಬ್ಬರೂ ಲಖನೌ ಪ್ರವಾಸದ ವೇಳೆ ಸಂಬಂಧಿಕರ ಮನೆಯಲ್ಲಿ ತಂಗಿದ್ದು, ನಿರ್ಜನ ಪ್ರದೇಶದಲ್ಲಿ ಅಡಗುದಾಣ ಹುಡುಕಲು ಸಹ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ 7,500 ಪುಟಗಳ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *