ಕುಮಟಾ: ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಈಚೆಗೆ ಪಶ್ಚಿಮ ಬಂಗಾಲದ ಮುರ್ಶಿದಾಬಾದ್‌ನ ಗಂಗಾ ನದಿಯಲ್ಲಿ ಆಯೋಜಿಸಿದ್ದ ಮಹಿಳೆಯರ 19 ಕಿ.ಮೀ. ದೂರದ ರಾಷ್ಟ್ರೀಯ ಮುಕ್ತ ಈಜು ಸ್ಪರ್ಧೆಯಲ್ಲಿ ನೇಹಾ ಸಣಬಡ್ತಿ (19 ವರ್ಷ) 4ನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ಸದ್ಯ ಕೋಲ್ಕತ್ತದಲ್ಲಿ ನೆಲೆಸಿರುವ ಕುಮಟಾ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾ ಸಣಬಡ್ತಿ ಕೋಲ್ಕತ್ತಾದಲ್ಲಿ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನಾಗರಾಜ ಸಣಬಸ್ತಿ ಅವರ ಪುತ್ರಿ. ಮುರ್ಶಿದಾಬಾದ್‌ನ ಗಂಗಾ ಹಾಗೂ ಭಾಗೀರಥಿ ನದಿಯ ಸಂಗಮ ಪ್ರದೇಶದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಐದು ಬಹುಮಾನ ಇಡಲಾಗಿತ್ತು.
ನೇಹಾ 19 ಕಿ.ಮೀ. ದೂರವನ್ನು 2 ತಾಸು 28 ನಿಮಿಷದಲ್ಲಿ ಈಜಿ ನಾಲ್ಕನೇ ಬಹುಮಾನ ಗಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಬಿ.ಟೆಕ್ ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾರೆ.
ಈ ಹಿಂದೆ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಈಜು ತರಬೇತಿ ಪಡೆದಿದ್ದ ಅವರು, ಈಗ ಬೆಂಗಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ಈಜು ತರಬೇತುದಾರ ಬಿಸ್ವಜಿತ್ ಚೌಧರಿ ನೇಹಾ ತರಬೇತುದಾರರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

