ಹುಬ್ಬಳ್ಳಿಯ ವಿದ್ಯಾರ್ಥಿಗಳೇ ಟಾರ್ಗೆಟ್..! ಹಾಡುಹಗಲೇ ಕಾಲೇಜ್–ಪಿಜಿಗಳಲ್ಲಿ ಕೈಚಳಕ – ವಿದ್ಯಾನಗರ ಪೊಲೀಸರ ಖಡಕ್ ಆಪರೇಷನ್..!
ಹುಬ್ಬಳ್ಳಿ ನಗರದ ವಿದ್ಯಾನಗರ ಭಾಗದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಸರಣಿ ಲ್ಯಾಪ್ಟಾಪ್ ಕಳ್ಳತನ ನಡೆಸುತ್ತಿದ್ದ ಅಂತರ ಜಿಲ್ಲಾ ಖದೀಮರ ಜಾಲವನ್ನು ವಿದ್ಯಾನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ವಿದ್ಯಾರ್ಥಿಗಳಂತೆ ವೇಷಧರಿಸಿ ಕಾಲೇಜ್ ಹಾಗೂ ಪಿಜಿಗಳಿಗೆ ಎಂಟ್ರಿ ಕೊಡುತ್ತಿದ್ದ ಆರೋಪಿಗಳು, ಯಾರಿಗೂ ಅನುಮಾನ ಬಾರದಂತೆ ಹಾಡುಹಗಲೇ ಕಳ್ಳತನ ನಡೆಸುತ್ತಿದ್ದರು…
ಹೌದು… ಬಿವಿಬಿ ಕಾಲೇಜ್ ಸುತ್ತಮುತ್ತಲಿನ ವಿದ್ಯಾರ್ಥಿಗಳ ಪಿಜಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಖದೀಮರು, ಸಾಮಾನ್ಯ ವಿದ್ಯಾರ್ಥಿಗಳಂತೆ ನಡೆದುಕೊಂಡು ಪಿಜಿ ಒಳಗೆ ಪ್ರವೇಶಿಸುತ್ತಿದ್ದರು. ಸೆಕ್ಯೂರಿಟಿ ಸಿಬ್ಬಂದಿ ಕಣ್ಣಿಗೆ ಮಣ್ಣು ಎರಚಿ, ವಿದ್ಯಾರ್ಥಿಗಳು ಹೊರಗಿದ್ದ ಸಮಯದಲ್ಲಿ ರೂಮ್‌ಗಳಿಗೆ ನುಗ್ಗಿ ಲ್ಯಾಪ್ಟಾಪ್‌ಗಳನ್ನು ಎಗರಿಸಿ ಪರಾರಿಯಾಗುತ್ತಿದ್ದರು…
ಈ ಖದೀಮರ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದ್ದವು..
ಒಟ್ಟು 9 ಲ್ಯಾಪ್ಟಾಪ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಯಿತು.. ತಾಂತ್ರಿಕ ಮಾಹಿತಿ, ಮೊಬೈಲ್ ಟ್ರ್ಯಾಕಿಂಗ್ ಹಾಗೂ ಸಿಸಿಟಿವಿ ಆಧರಿಸಿ ಆರೋಪಿಗಳ ಜಾಡು ಹಿಡಿದ ಪೊಲೀಸರು, ನೇರವಾಗಿ ಆಂಧ್ರಪ್ರದೇಶಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು…
ಕೊನೆಗೂ ಸತ್ಯವೇಲು ಚೌಡೇಪಲ್ಲಿ ಹಾಗೂ ಸರವಣ ಚೌಡೇಪಲ್ಲಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಸುಮಾರು ₹5.40 ಲಕ್ಷ ಮೌಲ್ಯದ 6 ಲ್ಯಾಪ್ಟಾಪ್‌ಗಳು ಹಾಗೂ 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ…
ವಿದ್ಯಾರ್ಥಿಗಳ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿಕೊಂಡು ಆತಂಕ ಸೃಷ್ಟಿಸಿದ್ದ ಖದೀಮರಿಗೆ ವಿದ್ಯಾನಗರ ಪೊಲೀಸರು ಕೊನೆಗೂ ಬ್ರೇಕ್ ಹಾಕಿದ್ದು, ಪ್ರಕರಣ ಭೇದಿಸಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

