Breaking News

ಮಗು ಮಾರಾಟಕ್ಕೆ ಒಪ್ಪಲಿಲ್ಲ, ತವರಿನಿಂದ ಹಣ ತರುತ್ತಿಲ್ಲ ಎಂದು ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವರದಕ್ಷಿಣೆ ಹಾಗೂ ಕುಟುಂಬ ಕಲಹದ ಹಿನ್ನೆಲೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಗುಲ್‌ಶೀರ್ ಭಾನು (31) ಅವರ ಸಾವಿಗೆ ಪತಿ ಸೈಫುಲ್ಲಾ ಹಾಗೂ ಕುಟುಂಬಸ್ಥರು ಕಾರಣ ಎಂದು ಮೃತೆಯ ಪೋಷಕರು ಆರೋಪಿಸಿದ್ದಾರೆ. ಮೃತೆಯ ಕುಟುಂಬದವರ ಪ್ರಕಾರ, ಪತಿ ಪದೇಪದೇ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನು. ಬಕ್ರೀದ್ ಹಬ್ಬದ ದಿನ ನಡೆದ ಗಲಾಟೆಯ ಬಳಿಕ ಗುಲ್‌ಶೀರ್ ಭಾನು ಮೃತಪಟ್ಟಿದ್ದು, ಈ ಕುರಿತು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಪತಿ ಹಾಗೂ ಕುಟುಂಬದ ಕೆಲವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *