ಬೆಂಗಳೂರು: ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದರ್ಬಿನ್ ದಾಸ್ ಹಾಗೂ ಧನುಷ್ಯಾ ಬಂಧಿತ ದಂಪತಿ. ಗಂಡ ದರ್ಬಿನ್ ದಾಸ್ ತಾನೂ KIALನಲ್ಲಿ ಕಸ್ಟಮ್ಸ್ ಅಧಿಕಾರಿ, ಕೆಲಸ ಕೊಡಿಸುತ್ತೇನೆಂದು ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ.
ಇತ್ತ ದರ್ಬಿನ್ ಪತ್ನಿ ಧನುಷ್ಯಾ ಸಹ ತನ್ನ ಗಂಡ ಕಸ್ಟಮ್ಸ್ ಅಧಿಕಾರಿ, ಕಡಿಮೆ ಬೆಲೆಗೆ ಸೀಜ್ ಮಾಡಿದ ಚಿನ್ನಾಭರಣ ಸಿಗುತ್ತೆ ಎಂದು ಹಣ ಪಡೆದು ವಂಚಿಸುತ್ತಿದ್ದಳು. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಕೊಡಿಗೆಹಳ್ಳಿ ಪೊಲೀಸರು, ಆರೋಪಿಗಳಿಂದ 34 .50 ಲಕ್ಷ ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

