Breaking News

ರಾತ್ರಿ ಡ್ಯೂಟಿಯಲ್ಲಿ ಮದ್ಯದ ಮತ್ತಲ್ಲಿ ಪೊಲೀಸರು..? ಜನರಿಗೆ ರಕ್ಷಕರೇ ಈಗ ಭಯದ ಕಾರಣವಾ..!

ಗಸ್ತು ಹೆಸರಿನಲ್ಲಿ ದರ್ಪ, ಮದ್ಯಪಾನ ಮಾಡಿ ಕಿರುಕುಳ ಆರೋಪ..! ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಆಗ್ತಿದೆಯಾ ಕೆಲ ಸಿಬ್ಬಂದಿ..?

ರಾತ್ರಿ ಡ್ಯೂಟಿ.. ಮದ್ಯದ ಮತ್ತಲ್ಲಿ ಪೊಲೀಸ್..?

ಸಾರ್ವಜನಿಕರಿಗೆ ಕಿರುಕುಳ, ದೌರ್ಜನ್ಯ ಆರೋಪ..! ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಆಗ್ತಿದೆಯಾ ಕೆಲ ಸಿಬ್ಬಂದಿ ವರ್ತನೆ..?

ರಾಜ್ಯದ ಪೊಲೀಸ್ ಇಲಾಖೆ ಶಿಸ್ತಿನ ಪ್ರತೀಕ, ಕಾನೂನು ಸುವ್ಯವಸ್ಥೆಯ ಕಾವಲುಗಾರ. ಆದರೆ ಇದೇ ಇಲಾಖೆಯ ಕೆಲ ಸಿಬ್ಬಂದಿಗಳ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ…

ರಾತ್ರಿ ಗಸ್ತು, ತಪಾಸಣೆ ಮತ್ತು ತುರ್ತು ಸೇವೆ 112 ಕರ್ತವ್ಯದಲ್ಲಿರುವ ಕೆಲ ಪೊಲೀಸ್ ಸಿಬ್ಬಂದಿಗಳು ಮದ್ಯಪಾನ ಮಾಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ರಸ್ತೆ ಬದಿ ಹಾಗೂ ಖಾಸಗಿ ಹೋಟೆಲ್‌ಗಳಲ್ಲಿ ಊಟ ಮಾಡಿ ಹಣ ಪಾವತಿಸದೇ ದರ್ಪ ತೋರಿಸುತ್ತಿದ್ದಾರೆ, ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದನೆ,..

ಬೆದರಿಕೆ ಹಾಗೂ ಹಲ್ಲೆಗೂ ಮುಂದಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ…

ಸಮವಸ್ತ್ರದಲ್ಲೇ ಮದ್ಯ ಖರೀದಿ.. ಅದೇ ಸಮವಸ್ತ್ರದಲ್ಲೇ ಮಧ್ಯಪಾನ..!

ಇದೀಗ ಈ ರೀತಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತರುತ್ತಿವೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ..
ರಾತ್ರಿ ವಾಹನ ತಪಾಸಣೆ ಹೆಸರಿನಲ್ಲಿ ಕಿರುಕುಳ..?

ಯಾವುದೇ ಸಂಚಾರ ನಿಯಮ ಉಲ್ಲಂಘನೆ ಇಲ್ಲದಿದ್ದರೂ, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ವಾಹನಗಳನ್ನು ಅನಗತ್ಯ ತಡೆದು ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ, ಬೆದರಿಕೆ, ದರ್ಪ ಪ್ರದರ್ಶನ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ..

ಕೆಲ ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆಯಿಂದ ಇಡೀ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳಿಗೂ ಕೆಟ್ಟ ಹೆಸರು ಬರುತ್ತಿದೆಯಾ..? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ…

ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ:

ರಾತ್ರಿ ಕರ್ತವ್ಯಕ್ಕೆ ತೆರಳುವ ಮೊದಲು ಕಡ್ಡಾಯ ಮದ್ಯಪಾನ ಪರೀಕ್ಷೆ..

ಗಸ್ತಿನಲ್ಲಿರುವ ಸಿಬ್ಬಂದಿಗಳ ಮೇಲೆ ಸರ್ಪ್ರೈಸ್ ಚೆಕಿಂಗ್,

112 ಹಾಗೂ ರಾತ್ರಿ ಪಾಳಿಯ ಸಿಬ್ಬಂದಿಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ,..

ಪ್ರತಿದಿನ ರೋಲ್‌ಕಾಲ್‌ನಲ್ಲಿ ಖಡಕ್ ಎಚ್ಚರಿಕೆ,..

ನೀಡುವಂತೆ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಿಗೆ ವಿಶೇಷ ಸುತ್ತೋಲೆ ಹೊರಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ…

ಜನರಿಗೆ ಕಾನೂನು ಬೋಧಿಸುವವರೇ ಕಾನೂನು ಉಲ್ಲಂಘಿಸಿದರೆ, ಜನರು ನ್ಯಾಯಕ್ಕಾಗಿ ಯಾರನ್ನು ನಂಬಬೇಕು..? ಇದೇ ಈಗ ಸಾರ್ವಜನಿಕರ ದೊಡ್ಡ ಪ್ರಶ್ನೆ..!

Share News

About Shaikh BigTv

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *