ತೀರ್ಥಹಳ್ಳಿ: ಫಾರಂಹೌಸ್ ವೊಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಆಗುಂಬೆ ಪೊಲೀಸರು 1 ಲಕ್ಷಕ್ಕೂ ಹೆಚ್ಚಿನ ಮಾಲಿನ ಸಮೇತ ಇಬ್ಬರನ್ನು ಬಂಧಿಸಿದ ಘಟನೆ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣ್ಣುವಳ್ಳಿ ಗ್ರಾಮದಲ್ಲಿ ಜೂ.5ರ ಶುಕ್ರವಾರ ನಡೆದಿದೆ. ಭದ್ರಾವತಿ ತಾಲೂಕಿನ ಬಾಲರಾಜ್@ಕಿರಣ ಬಿನ್ ಜಾನ್ (34) ಹಾಗೂ ಹರ್ಷ ಬಿನ್ ಮಂಜ (20) ಬಂಧಿತ ಆರೋಪಿಗಳು. ಜೂ.2 ರಂದು ಕಳ್ಳತನ ಪ್ರಕರಣವನ್ನು ಬೇಧಿಸಲು ಹೊರಟ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವನಗೌಡ ಪಾಟೀಲ್ ನೇತೃತ್ವದ ತಂಡ 7 ಮೊಬೈಲ್ ಫೋನ್‌ಗಳು-ಅಂದಾಜು ಮೌಲ್ಯ 1,41,000/- ರೂ ಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್-ಅಂದಾಜು ಮೌಲ್ಯ 30,000/- ರೂ.ಗಳು ಸೇರಿ ಒಟ್ಟು 1 ಲಕ್ಷ 71 ಸಾವಿರ ರೂ. ಗಳ ಮೌಲ್ಯದ ಮಾಲು ಹಾಗೂ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ. ಆಗುಂಬೆ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

