ಸಂಬಳ ದಪ್ಪ… ಆದ್ರೆ ಲಂಚದ ಲಾಲಸೆ ತಪ್ಪಿಲ್ಲ..! ಕೊನೆಗೆ ಲೋಕಾಯುಕ್ತ ಬಲೆಗೆ ಬಿದ್ದು ಮಾನ ಹರಾಜು..!
ಬೆಂಗಳೂರು ದಕ್ಷಿಣ ಜಿಲ್ಲಾ RTO ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಸರ್ಕಾರ ಸಂಬಳ ಕೊಡ್ತಿದ್ರೂ ಲಂಚಕ್ಕೆ ಕೈ..? ಕೊನೆಗೆ ಸಿಗೋದು ಅವಮಾನ, ಅಮಾನತು, ಕೇಸ್..!
ಸರ್ಕಾರದಿಂದ ಉತ್ತಮ ಸಂಬಳ, ಸೌಲಭ್ಯ, ಗೌರವ ಎಲ್ಲವೂ ಸಿಕ್ಕಿದರೂ ಕೆಲ ಅಧಿಕಾರಿಗಳು ಇನ್ನೂ ಲಂಚದ ಮೋಹ ಬಿಡುತ್ತಿಲ್ಲ ಎಂಬ ಆರೋಪಗಳು ಮತ್ತೆ ಮತ್ತೆ ಕೇಳಿಬರುತ್ತಿವೆ.

ಜನರ ಕೆಲಸ ಮಾಡಲು ಸಂಬಳ ಪಡೆಯುವ ಕೆಲವರು, ಅದೇ ಕೆಲಸಕ್ಕೆ ಜನರ ಜೇಬಿಗೆ ಕೈ ಹಾಕಲು ಯತ್ನಿಸುವ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿವೆ..
ಹಣ ಕೊಟ್ಟರೆ ಮಾತ್ರ ಕೆಲಸ” ಎಂಬ ಮನೋಭಾವದಿಂದ ಜನರನ್ನು ಸುತ್ತಾಡಿಸುವವರ ಮೇಲೆ ಈಗ ಲೋಕಾಯುಕ್ತದ ಕಣ್ಣು ಕೆಂಪಾಗಿದೆ. ಲಂಚದ ಹಣ ಕೈಗೆ ಬಂದ ಕ್ಷಣದಲ್ಲೇ ಬಲೆ ಬೀಳುವ ಪ್ರಕರಣಗಳು ಹೆಚ್ಚುತ್ತಿದ್ದು, ಅಧಿಕಾರಿಗಳ ಗೌರವ ಕ್ಷಣಾರ್ಧದಲ್ಲಿ ನೆಲಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ…
ಒಂದು ಕ್ಷಣದ ಲೋಭ, ಇಡೀ ಜೀವನದ ಹೆಸರು ಹಾಳು ಮಾಡುವಂತಾಗಿದೆ. ಸಮಾಜದಲ್ಲಿ ಗೌರವದಿಂದ ಬದುಕಬೇಕಾದವರು, ಕೊನೆಗೆ ಸುದ್ದಿಯ ಹೆಡ್ಲೈನ್ ಆಗಿ, ತನಿಖೆ–ಕೋರ್ಟ್ ಸುತ್ತುವ ಪರಿಸ್ಥಿತಿ ಎದುರಿಸುತ್ತಿದ್ದಾರೆ..
ಸಂಬಳ ಇದ್ದೂ ಲಂಚಕ್ಕೆ ಕೈ ಹಾಕಿದ್ರೆ… ಕೊನೆಗೆ ಸಿಗೋದು ಅವಮಾನವೇ!”
bigtvnews | Hubli Dharwad News | Kannada News | Karnataka News Hubli News | News In Hubli | Local news

