Breaking News

ಹುಬ್ಬಳ್ಳಿ ಗಲಾಟೆ: ಮಾಹಿತಿ ಕಲೆ ಹಾಕಿದ ಜಿಲ್ಲಾಧಿಕಾರಿ


ಹುಬ್ಬಳ್ಳಿ: ಯುವಕನೋರ್ವ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವನ್ನು ಎಡಿಟ್ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದ್ದರಿಂದ ನಿನ್ನೆ ರಾತ್ರಿ ಹಳೇ-ಹುಬ್ಬಳ್ಳಿ ಪ್ರದೇಶದಲ್ಲಿ ನಡೆದ ಕಲ್ಲು ತೂರಾಟ, ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಳೇ-ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ಕಲೆ ಹಾಕಿದರು.

ಹಳೆ ಹುಬ್ಬಳ್ಳಿ ಠಾಣೆ, ಹಿಂದೂ ದೇವಾಲಯ ಹಾಗೂ ಆಸ್ಪತ್ರೆ ಮೇಲೆ ಕಲ್ಲು ತೋರಾಟ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದರ ಮಾಹಿತಿಯನ್ನು
ಇವರೊಂದಿಗೆ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಮ್. ಹಿಂಡಸಗೇರಿ, ಕಾಂಗ್ರೆಸ್ ಧುರೀಣ ಅಲ್ತಾಫ್ ಹಳ್ಳೂರ ಠಾಣೆಗೆ ಆಗಮಿಸಿ ಘಟನೆ ಕುರಿತು ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಲಾಬುರಾಮ್, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Share News

About admin

Check Also

ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ: ಜಲಾಲ್ ನ ಬಂಧನ !

ಬೆಂಗಳೂರು: ಪುಲಿಕೇಶಿನಗರದ ಜರ್ಮಿಯಾ ರಸ್ತೆಯ ಕಟ್ಟಡವೊಂದರಲ್ಲಿ ಅ.20ರಂದು ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಜಲಾಲ್ (25) ಎಂಬ ಯುವಕನನ್ನು …

Leave a Reply

Your email address will not be published. Required fields are marked *