Breaking News
Featured Video Play Icon

ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ

ಹುಬ್ಬಳ್ಳಿ: ಬಿಎಸ್ ವೈ ಹಾಗೂ ರಾಮುಲು ಮೇಲೆ ಕೋವಿಡ್ ಹಗರಣ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ‌ ಸಿದ್ಧರಾಮಯ್ಯ , ಅದು ಸಚಿವ ಸಂಪುಟಕ್ಕೆ ಇನ್ನೂ ಬಂದಿಲ್ಲ.ಸಬ್ ಕಮೀಟಿ ಪರಿಶೀಲನೆ ಮಾಡುತ್ತಿದೆ.ಸಬ್ ಕಮೀಟಿ‌ವರದಿ‌ನೀಡಿದ ಕೂಎಲೇ ತನಿಖೆ ಶುರುವಾಗುತ್ತೆ.ಇದು ಯಾವುದೇ ಗೊಡ್ಡು ಬೆದರಿಕೆ ಅಲ್ಲಾ ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಕೆಲ್‌ ಕುನ್ನಾ ಅವರ ಅಧ್ಯಕ್ಷತೆಯಲ್ಲಿ‌ ನೀಡಿರುವ ವರದಿಬಾಧಾರದ ಮೇಲೆ ಕೇಸ್ ಹಾಕಲಾಗಿದೆ. ಗೊಡ್ಡು ಬೆದರಿಕೆ ಅಂದ್ರೆ ಏನು..?‌ಸಮೀತಿ‌ ಈ ಬಗ್ಗೆ ವರದಿ ನೀಡಿದೆ ಅದರಲ್ಲಿ‌ಏನು ಗೊಡ್ಡು ಬೆದರಿಕೆ‌ ಇದೆ ?ಸಬ್ ಕಮೀಟಿಯಿಂದ ವರದಿ‌ಬಂದ ಮೇಲೆ ಎಲ್ಲವೂ ಆರಂಭವಾಗುತ್ತೆ.ನ್ಯಾಯಾಂಗ ಇರೋದು ನ್ಯಾಯ ಕೊಡುವುದಕ್ಕೆ.ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋಕೆ ನ್ಯಾಯಾಂಗ ಇದೆ.

ಮಾಜಿ ಸಿಎಂ ಬಿಎಸ್ ವೈ ಗೆ ಕೊಲೆ ಯತ್ನ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ,ಯಾಕೆ ಆವಾಗ ಪ್ರಕರಣ ದಾಖಲು ಮಾಡಿಲ್ಲ.ಕೊಲೆ ಮಾಡೋಕೆ ಪ್ರಯತ್ನ ಮಾಡಿದಮೇಲೆ ಯಾಕೆ ಅವರ ಮೇಲೆ ಕೇಸ್ ದಾಖಲು ಮಾಡಲಿಲ್ಲ…?ಈಗ್ಯಾಕೆ ಅದರ ಬಗ್ಗೆ ಹೇಳುತ್ತಿದ್ದಾರೆ..? ನ್ಯಾಯಾಲಯದ ಮೇಲೆ ಅವರಿಗೆ ನಂಬಿಕೆನೇ ಇಲ್ಲ.

ಕರ್ನಾಟಕದಲ್ಲಿ 700 ಕೋಟಿ ಅಕ್ರಮ ಹಣದಿಂದ ಕಾಂಗ್ರೆಸ್ ಚುನಾವಣೆ ಮಾಡುತ್ತಿದೆ ಎಂಬ ಪ್ರಧಾನಿ ಮೋದಿ ಆರೋಪ‌ ವಿಚಾರಕ್ಕೆ ಪ್ರತಿಕ್ರಿಯಿಸಿ,ಒಬ್ಬ ಪ್ರಧಾನಿ ಆದವರು ಈ ರೀತಿ ಹೇಳಿಕೆ ನೀಡೋದು ಅವರ ಸ್ಥಾನಕ್ಕೆ ಅಗೌರವ ತರುವಂತದ್ದು.ಯಾರಾದರೂ ಅಬಕಾರಿ‌ಯಲ್ಲಿ 700 ಕೋಟಿ ಮಾಡೋಕಾಗುತ್ತಾ..? ಅಬಕಾರಿ‌ ಇಲಾಖೆಯವರು ನಮಗೆ ಯಾಕೆ ಹಣ ಕೊಡ್ತಾರೆ..? ಒಬ್ಬ ಪ್ರಧಾನ‌ಮಂತ್ರಿ ಸುಳ್ಳು ಹೇಳಬೇಕಾದ್ರೆ ಇತಿಮಿತಿ‌ ಇರಬೇಕುಬಿಜೆಪಿಯವರು ರಾಜಕೀಯಕ್ಕಾಗಿ ಈ‌ ರೀತಿ‌ ಆರೋಪ ಮಾಡುತ್ತಿದ್ದಾರೆ 17 ಜನ ಎಂಎಲ್ ಎ ಗಳನ್ನ‌ಕೊಂಡುಕೊಂಡರಲ್ಲ ಆ ಹಣ ಎಲ್ಲಿಂದ ಬಂತು..? ಸಿಎಂ‌ ಆಗಬೇಕಾದ್ರೆ 2 ಸಾವಿರ ಕೋಟಿ ಕೊಡಬೇಕು‌ಅಂತಾ ಯತ್ನಾಳ್ ಅವರೇ ಹೇಳಿದ್ರು. ಅದು ಯಾವ ಹಣ..? ಇದು ನಾನು ಹೇಳಿರೋದಲ್ಲ‌ ಬಿಜೆಪಿಯ ಯತ್ನಾಳ್ ಅವರೇ ಹೇಳಿದ್ದು. ಯಡಿಯೂರಪ್ಪ, ಬೊಮ್ಮಾಯಿ 2000 ಕೋಟಿ ಕೊಟ್ಟು ಸಿಎಂ ಆಗಿದ್ರು ಅಂತಾ ಯತ್ನಾಳ್ ಅವರೇ ಹೇಳಿದ್ರು.ಆ ಹಣ ಎಲ್ಲಿಂದ ಓಡಿ‌ ಬಂತು ಎಂದರು.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *