ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ:ದೀಪಾವಳಿ ಭರ್ಜರಿ ಹೋರಿ ಹಬ್ಬ

ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ.

ಹಾನಗಲ್: ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಹೋರಿ ಬೇದರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..

ನಾಡಿನ ದೊಡ್ಡ ಹಬ್ಬವಾದ ದೀಪಾವಳಿ ಹಬ್ಬದ ಪ್ರಯುಕ್ತ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ವಿಜೃಂಭಣೆಯಿಂದ ನೆಡೆಯಿತು. ರೈತ ತಾನು ಬೆಳೆಸಿದ ಎತ್ತುಗಳನ್ನು ಶೃಂಗರಿಸಿ ಅದಕ್ಕೊಂದು ಹೆಸರು ನೇಮಿಸಿ ಅದನ್ನು ಕೂಗುತ್ತಾ ಅಖಾಡದಲ್ಲಿ ಓಡೋಕೆ ಬಿಟ್ಟರೆ ನೋಡುಗರಿಗೆ ಹಬ್ಬದ ವಾತವರಣ ಮನೆಮಾಡಿರುವಂತಿತ್ತು.ಇನ್ನು ಶೃಂಗಾರಗೊಂಡು ಮೈತುಂಬ ಕೊಬ್ಬರಿ,ರಿಬ್ಬನ್ ,ಇನ್ನಿತರ ಅಲಂಕಾರಿಕ ವಸ್ತು ಧರಿಸಿ ಬರುವ ಹೋರಿಗಳನ್ನು ಹಿಡಿಯುವ ಪೈಲ್ವಾನರಂತು ಬಲು ಧೈರ್ಯದವರು .ಯಾವುದೇ ಹೋರಿ ಇರಲಿ ಜೀವದ ಹಂಗು ತೋರೆದು ಅದನ್ನು ಹಿಡಿಯುವ ಪ್ರಯತ್ನಕ್ಕೆ ಮುಂದಾಗ್ತಾರೆ. ಹೋರಿಗಳಿಗೆ ರೈತರು ತಮಗೆ ಇಷ್ಟವಾದ ಹೆಸರು ಇಟ್ಟು ಅವುಗಳನ್ನು ಅಕಾಡಕ್ಕೆ ಬಿಟ್ಟಾಗ .ಇನ್ನು ಹೋರಿಗಳ ಹೆಸರು ಕೇಳಿ ನೋಡುಗರಂತು ಸಿಳ್ಳೆ ಕೇಕೆ,ಚಪ್ಪಾಳೇ ಹೊಡೆದು ನಮ್ಮ ಇಷ್ಟವಾದ ಹೋರಿ ಬಂತೆಂದು ಹುರಿದುಂಬಿಸುತ್ತಿದ್ದರು. ಇನ್ನು ರೈತರು ತಮ್ಮ ತಮ್ಮ ಹೋರಿಗಳಿಗೆ ತಮಗೆ ಇಷ್ಟವಾದ ಹೆಸರನ್ನಿಟ್ಟು ಕೂಗುತ್ತಿದ್ದರು ಭಗವಾನ್ ಸಿಂಹದಮರಿ ಅನಾಹುತ ಮೈಸೂರು ಹುಲಿ ಗರುಡ ವೀರಕೇಸರಿ ಹಿಗೆ ಹಲವು ಹೆಸರುಗಳಿಂದ ಕೂಗುತ್ತಾ ಗುರಿ ಹಿಂದೆ ಅಖಾಡದಲ್ಲಿ ಓಡುತ್ತಿದ್ದರು.

ಗ್ರಾಮದಲ್ಲಿನ 50 ಕ್ಕೂ ಹೆಚ್ಚು ಹೋರಿಗಳು ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ಹಲವು ಹೋರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶನ ನೀಡಿ ಹಬ್ಬಕ್ಕೆ ಮೆರಗು ತಂದವು. ಈ ವೇಳೆ ಮಾತನಾಡಿದ ಗ್ರಾಮದ ಹಿರಿಯರಾದ ಮಾರ್ತಂಡಪ್ಪ ಲಚಮಣ್ಣನವರ ಮಾತನಾಡಿ ನಾವು ಹತ್ತು ವರ್ಷದಿಂದ ಈ ಹೋರಿ ಹಬ್ಬ ನಡೆಸಿಕೊಂಡು ಬಂದಿದ್ದೇವೆ ಹೋರಿ ಹಬ್ಬ ದಲ್ಲಿ ಯಾವುದೇ ತರಹದ ಹಿತಕರ ಘಟನೆಯ ನಡೆಯುವುದಿಲ್ಲ ನಾವು ಬಹುಮಾನ ಕೋಸ್ಕರ ಮಾಡುವುದಿಲ್ಲ ರೈತರ ಮನಸ್ಸಿನ ಖುಷಿಗೋಸ್ಕರ ಹಬ್ಬ ಮಾಡುತ್ತೇವೆ ಎಂದು ಮಾತನಾಡಿದರು

Share News

About BigTv News

Check Also

ಭಾರತ ಕ್ರಿಕೆಟ್ ತಂಡಕ್ಕೆ ನಾಯಕನಾದ ಕನ್ನಡಿಗ

ಒಂದು ವರ್ಷದಲ್ಲಿ ತಾನು ಟೀಂ ಇಂಡಿಯಾ ಟೆಸ್ಟ್ ತಂಡವನ್ನ ಮುನ್ನಡೆಸಲಿದ್ದಾರೆ. ಒಂದು ವರ್ಷದ ಹಿಂದೆ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್‌ನಲ್ಲಿ …

Leave a Reply

Your email address will not be published. Required fields are marked *

You cannot copy content of this page