Breaking News

ಹುಷಾರ್..! ಹುಷಾರ್..! ಗಂಡು ಮಗು ಹುಟ್ಟಿದೆ ಅಂತ ಪಾರ್ಟಿ ಕೇಳ್ಬೇಡಿ… ಮರ್ಡರ್ ಆಗೋ ಚಾನ್ಸ್ ಇದೆ..!

ಗಂಡು ಮಗು ಜನಿಸಿದ ಖುಷಿ ರಕ್ತಚರಿತ್ರೆಯಾಯಿತು ಸ್ನೇಹಿತನನ್ನೇ ಕೊಂದ ಗೆಳೆಯ..

ಪಾರ್ಟಿ ಕೊಡ್ರಪ್ಪ’ ಅಂದಿದ್ದೇ ತಪ್ಪಾಯ್ತು ಗೆಳೆಯನ ಕೈಯಲ್ಲಿ ಸ್ನೇಹಿತನ ಕೊಲೆ..

ಕ್ಷುಲ್ಲಕ ಜಗಳ, ಭೀಕರ ಅಂತ್ಯ. ಪಾರ್ಟಿ ವಿಚಾರಕ್ಕೆ ಜೀವ ಬಲಿ

ಬೆಳಗಾವಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವಂತಹ ಕೊಲೆ ಪ್ರಕರಣೊಂದು ಬೆಳಕಿಗೆ ಬಂದಿದೆ. ಗಂಡು ಮಗು ಹುಟ್ಟಿದ ಖುಷಿಯಲ್ಲಿ ಪಾರ್ಟಿ ಕೇಳಿದ್ದ ಸ್ನೇಹಿತನನ್ನೇ ಮತ್ತೊಬ್ಬ ಸ್ನೇಹಿತ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ನಡೆದಿದೆ…

ವಣ್ಣೂರು ಗ್ರಾಮದ ನಿವಾಸಿ ಹಣಮಂತಪ್ಪ ಇಟಗಿ ಮೃತ ದುರ್ದೈವಿ. ಆರೋಪಿಯಾದ ವಿಶ್ವನಾಥ್ ಪೂಜಾರಿಗೆ ಇತ್ತೀಚೆಗಷ್ಟೇ ಗಂಡು ಮಗು ಜನಿಸಿತ್ತು. ಇದೇ ವಿಚಾರವಾಗಿ ಹಣಮಂತಪ್ಪ, ಸ್ನೇಹಿತನ ಬಳಿ ಪಾರ್ಟಿ ನೀಡುವಂತೆ ಕೇಳಿದ್ದಾನೆ.ಮೊದಲಿಗೆ ಸಣ್ಣ ಮಾತಿನ ಚಕಮಕಿ ಆಗಿದ್ದರೂ, ಕೆಲವೇ ಕ್ಷಣಗಳಲ್ಲಿ ಅದು ಭಾರೀ ಗಲಾಟೆಗೆ ತಿರುಗಿದೆ…

ಮಾತಿಗೆ ಮಾತು ಬೆಳೆದು ಕೋಪೋದ್ರಿಕ್ತನಾದ ವಿಶ್ವನಾಥ್, ತನ್ನದೇ ಸ್ನೇಹಿತ ಹಣಮಂತಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.ಗಂಭೀರವಾಗಿ ಗಾಯಗೊಂಡ ಹಣಮಂತಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ…

ಸಣ್ಣ ವಿಷಯಕ್ಕೂ ಕೋಪದ ಕೈಗೆ ಬಿದ್ದರೆ ಜೀವವೇ ಹೋಗಬಹುದು ಅನ್ನೋದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *