Breaking News

ಪೊಲೀಸರಿಗೆ ಬಿಗ್ ಅಲರ್ಟ್! KARTAVYA ಆಪ್‌ನಲ್ಲಿ ಹಾಜರಾತಿ ಕಡ್ಡಾಯ, ತಪ್ಪಿದರೆ ಕ್ರಮ ಫಿಕ್ಸ್..!

ಬೆಳಗ್ಗೆ 10ಕ್ಕೆ ಚೆಕ್-ಇನ್ ಕಡ್ಡಾಯ: ಹಾಜರಾತಿ ನಿಯಮ ಉಲ್ಲಂಘಿಸಿದ ಪೊಲೀಸರಿಗೆ ಶಾಕ್..!

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಇನ್ನುಮುಂದೆ ಸರ್ಕಾರದ ಹೊಸ ಡಿಜಿಟಲ್ ಹಾಜರಾತಿ ವ್ಯವಸ್ಥೆಯಡಿ ಕಡ್ಡಾಯವಾಗಿ ಹಾಜರಾತಿ ದಾಖಲಿಸುವ ನಿಯಮ ಜಾರಿಯಾಗಿದೆ…

ಈ ಸಂಬಂಧ ಪೊಲೀಸ್ ಪ್ರಧಾನ ಕಚೇರಿಯಿಂದ ಮಹತ್ವದ ಜ್ಞಾಪನಾ ಪತ್ರ ಹೊರಡಿಸಲಾಗಿದ್ದು, ನಿಯಮ ಪಾಲಿಸದ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ…

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS) ಅಡಿಯಲ್ಲಿ, ಸರ್ಕಾರಿ ನೌಕರರು ತಮ್ಮ ಮೊಬೈಲ್‌ನಲ್ಲಿ ‘ಕರ್ತವ್ಯ’ (KARTAVYA) ಆಪ್ ಬಳಸಿ ದಿನನಿತ್ಯ ಹಾಜರಾತಿ ನಮೂದಿಸಬೇಕಾಗಿದೆ. ಮೇ 1, 2026ರಿಂದಲೇ ಈ ವ್ಯವಸ್ಥೆ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ ಮತ್ತು ಮಂಡಳಿಗಳಲ್ಲಿ ಜಾರಿಗೆ ಬಂದಿದೆ…

ಹೊಸ ನಿಯಮದ ಪ್ರಕಾರ, ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಕಡ್ಡಾಯವಾಗಿ CHECK IN ಮಾಡಬೇಕು. ಕರ್ತವ್ಯ ಮುಗಿಸಿ ಕಚೇರಿಯಿಂದ ಹೊರಡುವಾಗ CHECK OUT ದಾಖಲಿಸುವುದೂ ಅನಿವಾರ್ಯವಾಗಿದೆ. ಇದರಿಂದ ಸಿಬ್ಬಂದಿಯ ಹಾಜರಾತಿ ಹಾಗೂ ಕರ್ತವ್ಯದ ಅವಧಿಯನ್ನು ನಿಖರವಾಗಿ ದಾಖಲಿಸಲು ಸಾಧ್ಯವಾಗಲಿದೆ…

ಆದರೆ, ಯೋಜನೆ ಜಾರಿಗೆ ಬಂದು ಎರಡು ತಿಂಗಳು ಕಳೆದಿದ್ದರೂ, ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನೂ ‘ಕರ್ತವ್ಯ’ ಆಪ್‌ನಲ್ಲಿ ನೋಂದಣಿ ಮಾಡಿಸದೇ ಇರುವುದನ್ನು ಇಲಾಖೆ ಗಂಭೀರವಾಗಿ ಗಮನಿಸಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಸಿಬ್ಬಂದಿಯ ನಡೆಗೆ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ…

ಈ ಹಿನ್ನೆಲೆಯಲ್ಲಿ ಪೊಲೀಸ್ ಪ್ರಧಾನ ಕಚೇರಿಯ ಉಪ ಪೊಲೀಸ್ ಮಹಾ ನಿರೀಕ್ಷಕರು (ಕೇಂದ್ರಸ್ಥಾನ) ಹಾಗೂ KAAMS ನೋಡಲ್ ಅಧಿಕಾರಿ ಟಿ. ಶ್ರೀಧರ್ (ಐಪಿಎಸ್) ಅವರು ಜ್ಞಾಪನಾ ಪತ್ರ ಹೊರಡಿಸಿದ್ದಾರೆ…

ಇನ್ನೂ ಆಪ್‌ನಲ್ಲಿ ನೋಂದಣಿ ಮಾಡಿಸದ ಸಿಬ್ಬಂದಿಯನ್ನು ಪತ್ತೆಹಚ್ಚಿ, ತಕ್ಷಣವೇ ರಿಜಿಸ್ಟರ್ ಮಾಡಿಸಿ ಹಾಜರಾತಿ ದಾಖಲಿಸುವಂತೆ ಎಲ್ಲಾ ಘಟಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ…

ಒಟ್ಟಿನಲ್ಲಿ, ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಸರ್ಕಾರ ಹೆಜ್ಜೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಹಾಜರಾತಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *