Breaking News

ಸಚಿವ ಸಂಪುಟ ವಿಸ್ತರಣೆ 2.0: ಜು.8 ಬಳಿಕ ದೆಹಲಿ ದೌಡು, ಯಾರಿಗೆ ಸಿಗುತ್ತೆ ಮಂತ್ರಿಗಿರಿ ಭಾಗ್ಯ…?

ಸಚಿವ ಸಂಪುಟ 2.0: ಜು.8 ಬಳಿಕ ದೆಹಲಿ ದೌಡು, ಯಾರಿಗೆ ಮಂತ್ರಿಗಿರಿ ಲಕ್..?

20 ಸ್ಥಾನಗಳಿಗೆ 50+ ಆಕಾಂಕ್ಷಿಗಳು: ಕಾಂಗ್ರೆಸ್‌ನಲ್ಲಿ ಮಂತ್ರಿ ಕುರ್ಚಿಗೆ ಭಾರೀ ಫೈಟ್!

D. K. Shivakumar ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಭಾರೀ ಗರಿಗೆದರಿದೆ. ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ಇನ್ನೂ ರಚನೆಯಾಗಿಲ್ಲ. ಹೀಗಾಗಿ “ಸಂಪುಟ 2.0” ವಿಸ್ತರಣೆಗೆ ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ….

ಖಾಲಿ ಇರುವ 20 ಸಚಿವ ಸ್ಥಾನಗಳಿಗೆ 50ಕ್ಕೂ ಹೆಚ್ಚು ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದು, ಕೈ ಪಾಳಯದಲ್ಲಿ ಭಾರೀ ಪೈಪೋಟಿ ಆರಂಭವಾಗಿದೆ. ಸಚಿವ ಸ್ಥಾನಕ್ಕಾಗಿ ಹಿರಿಯರು, ಮಾಜಿ ಸಚಿವರು ಹಾಗೂ ಹೊಸ ಮುಖಗಳು ಹೈಕಮಾಂಡ್‌ ಮೇಲೆ ಒತ್ತಡ ಹೆಚ್ಚಿಸುತ್ತಿದ್ದಾರೆ…

Rahul Gandhi ಜುಲೈ 6ರಂದು ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ಸಾಗಲಿದ್ದು, ಅದರ ಬೆನ್ನಲ್ಲೇ ಜುಲೈ 8ರ ನಂತರ ಸಿಎಂ D. K. Shivakumar ಹಾಗೂ ಮಾಜಿ ಸಿಎಂ Siddaramaiah ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲೇ ಹೊಸ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ…ಹಿರಿಯರಿಗೆ ಮಣೆ..?

ಮಾಜಿ ಸಚಿವರ ಪೈಕಿ ದಿನೇಶ್ ಗುಂಡೂರಾವ್, ಹೆಚ್.ಕೆ. ಪಾಟೀಲ್, Zameer Ahmed Khan, ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ, ಆರ್.ಬಿ. ತಿಮ್ಮಾಪುರ್, ಹೆಚ್.ಸಿ. ಮಹದೇವಪ್ಪ ಮತ್ತು ಕೆ. ವೆಂಕಟೇಶ್ ಹೆಸರುಗಳು ಮುಂಚೂಣಿಯಲ್ಲಿವೆ…ಕೋಟಾ ಲೆಕ್ಕಾಚಾರ ಭಾರೀ ಟಫ್..!

SC, ST, ಮುಸ್ಲಿಂ ಹಾಗೂ ಪ್ರಾದೇಶಿಕ ಸಮತೋಲನದ ಲೆಕ್ಕಾಚಾರ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಸಾದ್ ಅಬ್ಬಯ್ಯ, ನಾರಾಯಣಸ್ವಾಮಿ, ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಹೆಸರುಗಳು ಚರ್ಚೆಯಲ್ಲಿವೆ. ಮುಸ್ಲಿಂ ಕೋಟಾದಲ್ಲಿ ತನ್ವೀರ್ ಸೇಠ್, ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಮತ್ತು ಎನ್.ಎ. ಹ್ಯಾರಿಸ್ ರೇಸ್‌ನಲ್ಲಿ ಇದ್ದಾರೆ…

ಯುವ ಮುಖಗಳಿಗೆ ಅವಕಾಶ..?ಪ್ರಾದೇಶಿಕ ಸಮತೋಲನ ಮತ್ತು ಯುವ ನಾಯಕತ್ವಕ್ಕೆ ಆದ್ಯತೆ ನೀಡುವ ಲೆಕ್ಕದಲ್ಲಿ ಮಾಗಡಿ ಬಾಲಕೃಷ್ಣ, ಶರತ್ ಬಚ್ಚೇಗೌಡ, ಎ.ಎಸ್. ಪೊನ್ನಣ್ಣ, ಅಜಯ್ ಧರ್ಮಸಿಂಗ್, ಪ್ರದೀಪ್ ಈಶ್ವರ್ ಸೇರಿದಂತೆ ಹಲವು ಹೊಸ ಮುಖಗಳು ಮುನ್ನೆಲೆಗೆ ಬಂದಿವೆ…

ಮಹಿಳಾ ಕೋಟಾದಲ್ಲೂ ಪೈಪೋಟಿLakshmi Hebbalkar ಅವರಿಗೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಜೊತೆಗೆ ರೂಪಾ ಶಶಿಧರ್, ಉಮಾಶ್ರೀ ಹಾಗೂ ನಯನಾ ಮೋಟಮ್ಮ ಹೆಸರುಗಳೂ ಚರ್ಚೆಯಲ್ಲಿವೆ…

ಒಟ್ಟಾರೆ, ಜುಲೈ 8 ಬಳಿಕ ನಡೆಯುವ ದೆಹಲಿ ಸಭೆಯೇ ರಾಜ್ಯ ರಾಜಕೀಯದ ದಿಕ್ಕು ತೋರಿಸಲಿದೆ. ಯಾರಿಗೆ ಮಂತ್ರಿಗಿರಿ ಭಾಗ್ಯ, ಯಾರಿಗೆ ನಿರಾಶೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

Share News

About Shaikh BigTv

Check Also

ಬೆಂಗಳೂರಲ್ಲಿ ಪುಂಡರ ಹಾವಳಿ: ಗಾಂಜಾ ಮತ್ತಿನಲ್ಲಿ ಡೆಲಿವರಿ ಬಾಯ್ ಮೇಲೆ ಹಲ್ಲೆ!

ಬೆಂಗಳೂರು: ಯಲಹಂಕದ ಅಟ್ಟೂರು ಲೇಔಟ್‌ನಲ್ಲಿ ಡೆಲಿವರಿ ಬಾಯ್‌ ಮೇಲೆ ಆರೇಳು ಮಂದಿ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. …

Leave a Reply

Your email address will not be published. Required fields are marked *