Breaking News

ಎಣ್ಣೆ ಪಾರ್ಟಿ: ಸ್ಕ್ರೂ ಡ್ರೈವರ್‌ನಿಂದ ಜಜ್ಜಿ ಗಳೆಯನ ಕೊಲೆ

ವಿಜಯಪುರ: ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ಹಣ ಹಾಗೂ ಮೊಬೈಲ್ ಫೋನ್‌ಗೆ ಬೇಡಿಕೆ ಇಟ್ಟ ಗೆಳೆಯನನ್ನೇ ಸ್ಕ್ರೂ ಡ್ರೈವರ್‌ನಿಂದ ಕೊಲೆ ಮಾಡಿರುವ ಘಟನೆ ನಗರದ ಚಪ್ಪರಬಂದ್ ಗಲ್ಲಿಯಲ್ಲಿ ನಡೆದಿದೆ. ಉಮರಸಾಬ ಪಟೇಲ್ (36) ಕೊಲೆಯಾದ ವ್ಯಕ್ತಿ. ನಬೀರಸೂಲ ಅಹ್ಮದ ಹೊಟಗಿ ಕೊಲೆ ಆರೋಪಿ. ನಬೀರಸೂಲ ತನ್ನ ಮನೆಯಲ್ಲಿ ಜು.4ರ ಶನಿವಾರ ರಾತ್ರಿ ಉಮರಸಾಬ ಜೊತೆ ಮದ್ಯಪಾನ ಮಾಡಿದ್ದ. ಇದಾದ ನಂತರ ಉಮರಸಾಬ ಹಣಕ್ಕಾಗಿ ಬೇಡಿಕೆ ಇಟ್ಟು ಮೊಬೈಲ್ ಪೋನ್ ಕೊಡಿಸುವಂತೆ ಪೀಡಿಸಿದ್ದಾನೆ. ಇದರಿಂದ ನಬೀರಸೂಲ ಮನೆಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ದಾಳಿ ಮಾಡಿ ತಲೆಗೆ ಹೊಡೆದಿದ್ದಾನೆ. ಈ ಪರಿಣಾಮ ಉಮರಸಾಬ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ. ಮತ್ತೊಂದೆಡೆ, ನಶೆಯಲ್ಲಿದ್ದ ನಬೀರಸೂಲ ಮನೆಯಲ್ಲೇ ಇಡೀ ರಾತ್ರಿ ನಿದ್ರೆಗೆ ಜಾರಿದ್ದ ಎಂದು ತಿಳಿದು ಬಂದಿದೆ. ಜು.5ರ ರವಿವಾರ ವಿಷಯ ತಿಳಿದು ಗೋಲಗುಂಬಜ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *