Breaking News

ಚಂದ್ರಯಾನಕ್ಕೆ ವಿಶೇಷ ಶುಭಕೋರಿದ ಪರಿಸರ ಸ್ನೇಹಿ ಕಲಾವಿದ.

ಇಂದು ಮದ್ಯಾಹ್ನ 3ಕ್ಕೆ ಚಂದ್ರಯಾನ ಚಾಲನೆ ಹಿನ್ನೆಲೆ ಧಾರವಾಡದ ಕಲಾವಿದ ಚಂದ್ರಯಾನಕ್ಕೆ ವಿಶೇಷ ಶುಭಾಶಯ ಕೋರಿದ್ದಾರೆ. ಕೆಲಗೇರಿ ಗಾಯತ್ರಿಪುರದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಎಂಬಾತರು ಇಸ್ರೋದ ಕಾರ್ಯಕ್ಕೆ ಶುಭಾಶಯ ತಿಳಿಸಿದ್ದಾರೆ.

LMV ರಾಕೆಟ್ ನ್ನ ಚಿಕ್ಕ ಪೈಪ್ ಗಳ ಮೂಲಕ ತಯಾರಿಸಿದ ಕಲಾವಿದ ಮಂಜುನಾಥ ಈ ಬಾರಿಯ ಚಂದ್ರಯಾನ ಯಾವುದೇ ರೀತಿಯಲ್ಲಿ ವಿಘ್ನ ಆಗದಂತೆ ಪ್ರಾರ್ಥಿಸಿದ್ದಾರೆ. ಕಳೆದ ಬಾರಿ ರೋವರ್ ಲ್ಯಾಂಡಿಂಗ್ ಸಮಸ್ಯೆ ಅನುಭವಿಸಿತ್ತು. ಆದ್ರೆ ಈ ಬಾರಿ ಹಾಗೆ ಆಗದಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಿನಿ ರಾಕೆಟ್ ನ್ನ ಗಣೇಶನ ಮುಂದಿಟ್ಟುಕೊಂಡು ಮಂಜುನಾಥ ಪ್ರಾರ್ಥನೆ ಮಾಡಿದ್ದು, ಈ ಬಾರಿಯ ರಾಕೆಟ್ ಉಡಾವಣೆಗೆ ಯಾವುದೇ ರೀತಿಯ ತೊಂದ್ರೆಯಾಗಬಾರದು ಎಂದು ವಿಘ್ನ ನಿವಾರಕ ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ. ಇಂದು ಮದ್ಯಾಹ್ನ 2.35ಕ್ಕೆ ಶ್ರೀಹರಿ ಕೋಟದಿಂದ ಚಂದ್ರಯಾನ 3 ಉಡಾವಣೆಯಾಗಲಿದೆ.

ಇದಷ್ಟೆ ಅಲ್ಲದೇ ರಾಜ್ಯ ಮತ್ತು ದೇಶ ಸಂಭ್ರಮ ಪಡುವಂತಹ ಘಳಿಗೆಗಳಲ್ಲಿ ಸಹ ಮಂಜುನಾಥ ಹಿರೇಮಠ ಈ ರೀತಿಯಾಗಿ ವಿಶೇಷ ಪೂಜೆ, ಪ್ರಾರ್ಥನೆ, ಸಂಭ್ರಮ ಪಡುತ್ತಾರೆ. ಈ ಹಿಂದೆ ಕೂಡ ಅನೇಕ ಬಾರಿ ತಮ್ಮ ಕೈಚಳಕದಿಂದ ಕಲಾಕೃತಿ ರಚಿಸಿ ಸುದ್ದಿಯಲ್ಲಿರುತ್ತಾರೆ.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *