ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿರುವ ವೇಳೆ ಅಪಚಿರಿತ ವ್ಯಕ್ತಿಗಳು ನುಗ್ಗಿದ ಘಟನೆ ನಡೆದಿದೆ. ಅಪರಿಚಿತರ ಪ್ರವೇಶದಿಂದ ಕಲಾಪದಿಂದ ಸಂಸದರು ಓಡಿ ಹೋಗಿದ್ದಾರೆ. ಸಂಸತ್ತಿನ ಗುಂಡಿನ ದಾಳಿ ನಡೆದ ದಿನವಾದ ಇವತ್ತೆ ಈ ಅಪಚಿತರ ಅನಿರೀಕ್ಷಿತ ಪ್ರವೇಶ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಇದ್ದಕ್ಕಿದ್ದಂತೆ ಸುಮಾರು 20 ವರ್ಷ ವಯಸ್ಸಿನ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಹಾರಿದರು. ಅವರ ಕೈಯಲ್ಲಿ ಡಬ್ಬಿಗಳು ಇದ್ದವು. ಈ ಡಬ್ಬಿಗಳು ಹಳದಿ ಹೊಗೆಯನ್ನು ಹೊರಸೂಸುತ್ತಿದ್ದವು. ಅವರಲ್ಲಿ ಒಬ್ಬರು ಸ್ಪೀಕರ್ ಪೀಠದ ಕಡೆಗೆ ಓಡಲು ಪ್ರಯತ್ನಿಸಿದರು. ಒಂದಷ್ಟು ಘೋಷಣೆಗಳನ್ನು ಕೂಗುತ್ತಿದ್ದರು. ಹೊಗೆ ವಿಷಕಾರಿಯಾಗಿರಬಹುದು. ಇದು 2001 ರಲ್ಲಿ ಸಂಸತ್ತಿನ ಮೇಲೆ ದಾಳಿಯಾದ ಡಿಸೆಂಬರ್ 13 ರಂದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





