Breaking News

ಕಾಡಿನ ಜಿಂಕೆ ಮನೆಗೆ ತಂದು ಸಾಕಿದ್ದ ಅರಣ್ಯ ಗಾರ್ಡ್ ಬಂಧನ: ಮನೆಯಲ್ಲಿ ಅಕ್ರಮ ಬಂದೂಕು ಪತ್ತೆ

ಹುಣಸೂರು: ಕಾಡಿನಿಂದ ಜಿಂಕೆ ಮರಿಗಳನ್ನು ತಂದು ಮನೆಯಲ್ಲಿ ಸಾಕಿದ್ದ ಆರೋಪದ ಮೇಲೆ ನಾಗರಹೊಳೆ ವನ್ಯಜೀವಿ ವಲಯದ ಬೀಟ್ ಗಾರ್ಡ್ ಪೊನ್ನಪ್ಪ ಅಲಿಯಾಸ್ ನವೀನ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ವಿಜಿಲೆನ್ಸ್, ಜಾಗೃತ ದಳ ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಆರೋಪಿಯು ಕೆಲ ತಿಂಗಳ ಹಿಂದೆ ಎರಡು ಜಿಂಕೆ ಮರಿಗಳನ್ನು ಮನೆಗೆ ತಂದಿದ್ದು, ಅವುಗಳಲ್ಲಿ ಒಂದನ್ನು ಕೊಂದು ಅದರ ಮಾಂಸವನ್ನು ಸೇವಿಸಿ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಹಂಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದಾಳಿ ವೇಳೆ ಮನೆಯ ಕೊಟ್ಟಿಗೆಯಲ್ಲಿ ಜೀವಂತ ಜಿಂಕೆ ಹಾಗೂ ಅಕ್ರಮ ಬಂದೂಕು ಪತ್ತೆಯಾಗಿದೆ. ವಿಚಾರಣೆ ವೇಳೆ ಜಿಂಕೆಗೆ ಗಾಯವಾಗಿದ್ದ ಕಾರಣ ಚಿಕಿತ್ಸೆ ನೀಡುತ್ತಿದ್ದೆ ಎಂದು ಆರೋಪಿ ಹೇಳಿದ್ದಾನೆ. ಆದರೆ ಇಲಾಖೆಗೆ ಮಾಹಿತಿ ನೀಡದ ಕಾರಣ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಕ್ಷಿಸಲಾದ ಜಿಂಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *