Breaking News

ಮದ್ದೂರು ಬಳಿ ಕಾರು ಅಡ್ಡಗಟ್ಟಿ ಕಬ್ಬಿಣದ ರಾಡಿನಿಂದ ಹಲ್ಲೆ: ಮೂವರ ಬಂಧನ

ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಸಾಗರ್ ಹಾಗೂ ಅವರ ಕುಟುಂಬದ ಕಾರಿಗೆ ಮತ್ತೊಂದು ಕಾರು ಲಘುವಾಗಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಬಳಿಕ ಆರೋಪಿಗಳು ಕಾರನ್ನು ಹಿಂಬಾಲಿಸಿ ಮದ್ದೂರಮ್ಮ ದೇವಸ್ಥಾನದ ಸಮೀಪದ ಮೇಲ್ಸೇತುವೆಯಲ್ಲಿ ಅಡ್ಡಗಟ್ಟಿದ್ದಾರೆ.
ಆರೋಪಿಗಳು ಸಾಗರ್ ಮೇಲೆ ಕಬ್ಬಿಣದ ಜಾಕ್‌ ರಾಡ್‌ನಿಂದ ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ಪತ್ನಿ, ತಾಯಿ ಹಾಗೂ ಕುಟುಂಬದ ಇತರ ಸದಸ್ಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಸಾಗರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೂವರು ಆರೋಪಿಗಳನ್ನು ಮದ್ದೂರು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸಲಾಗಿದೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *