ಹಾಸನ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ಅನುಚಿತ ವರ್ತನೆ ಆರೋಪದ ಮೇಲೆ ಬಿಇಓ ಅವರು ಶಿಕ್ಷಕನನ್ನು ಅನಮಾತುಗೊಳಿಸಿ ಆದೇಶ ಹೊರಡಿಸಿದ ಪ್ರಕರಣ ನಡೆದಿದೆ.ಧನಂಜಯ್ ಅನಮಾತುಗೊಂಡ ಶಿಕ್ಷಕ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮುರುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರಾಗಿರುವ ಧನಂಜಯ್ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಹಾಗೂ ಶಿಕ್ಷಕನ ವರ್ತನೆಯಿಂದ ಬೇಸತ್ತು ಹನ್ನೆರಡು ವಿದ್ಯಾರ್ಥಿಗಳು ದೂರು ಪೆಟ್ಟಿಗೆಗೆ ಚೀಟಿ ಬೆರೆದು ಹಾಕಿದ್ದರು. ವಿದ್ಯಾರ್ಥಿಗಳ ಪೋಷಕರಿಂದಲೂ ಬಿಇಓಗೆ ದೂರು ಸಲ್ಲಿಸಿದ ಹಿನ್ನಲೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಬಿಇಓ ಮೋಹನ್ ಪ್ರಾಥಮಿಕ ತನಿಖೆ ನಡೆಸಿ ಶಿಕ್ಷಕ ಧನಂಜಯ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

