Breaking News

ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ : ಚಾಕ್ಲೆಟ್, ತಿಂಡಿ ಆಸೆ ತೋರಿಸಿ ಬುದ್ಧಿಮಾಂದ್ಯ ಯುವತಿ ಮೇಲೆ ನಿರಂತರ ಅತ್ಯಾಚಾರ!

ಗದಗ : ರಾಜ್ಯದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಬುದ್ಧಿಮಾಂದ್ಯ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅರಸಣಗಿ ಗ್ರಾಮದಲ್ಲಿ ಈ ಒಂದು ನೀಚ ಕೃತ್ಯ ನಡೆದಿದೆ. ಚಾಕ್ಲೆಟ್ ಮತ್ತು ತಿಂಡಿ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಲಾಗಿದೆ. ಆರು ತಿಂಗಳ ಬಳಿಕ ಬುದ್ಧಿಮಾಂದ್ಯ ಯುವತಿ ಗರ್ಭಿಣಿಯಾಗಿದ್ದು ಅತ್ಯಾಚಾರ ಕೃತ್ಯ ಬಯಲಿಗೆ ಬಂದಿದೆ. ಯುವತಿಯ ತಾಯಿ ದುರ್ಗಪ್ಪ ಎನ್ನುವವ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಜುಲೈ 6 ಕ್ಕೆ ಜಿಮ್ಸ್ ಆಸ್ಪತ್ರೆಯಲ್ಲಿ ಯುವತಿಯ ಆರೋಗ್ಯ ತಪಾಸಣೆ ಆಗಿದೆ. ಈ ವೇಳೆ ಯುವತಿ ದೇಹದಲ್ಲಿ ಬದಲಾವಣೆ ಆಗಿದ್ದು ಕಂಡುಬಂದಿದೆ. ಬಳಿಕ ಗ್ರಾಮದಲ್ಲಿ ಕೃತ್ಯ ಬಯಲಾಗಿದೆ. ಗ್ರಾಮದ ಯುವಕರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ದುರ್ಗಪ್ಪ ಎಂಬ ನೀಚ ಈ ಒಂದು ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *