Breaking News

ರೈತನ ಮಗ ರಾಜ್ಯಕ್ಕೆ ಪ್ರಥಮ : ಹರ್ಷ ವ್ಯಕ್ತಪಡಿಸಿದ ಪಾಲಕರು

ಸವಣೂರು (ಹಾವೇರಿ): ತಾಲ್ಲೂಕಿನ ಹಳೆಮನ್ನಂಗಿ ಗ್ರಾಮದ ರೈತ ಜಿ.ಎನ್. ನಿಸ್ಸಿಮಗೌಡ್ರ ಅವರ ಮಗ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರವೀಣ ಬಸನಗೌಡ ನೀರಲಗಿ ಬಡತನದಲ್ಲಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.

‘ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ, ತಂದೆ-ತಾಯಿಗಳ ಆಶೀರ್ವಾದ ಹಾಗೂ ಸಹಕಾರದಿಂದ ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯಲು ಸಾಧ್ಯವಾಗಿದೆ.

ಶಿಕ್ಷಕರ ಬೋಧನೆಗೆ ತಕ್ಕಂತೆ ನಿತ್ಯ ವಿದ್ಯಾಭ್ಯಾಸ ಮಾಡಿದೆ. ಮನೆಯಲ್ಲಿ ಪಾಲಕರು ಕೂಡ ಸಹಕಾರ ನೀಡಿದರು’ ಎಂದು ಪ್ರವೀಣ ನೀರಲಗಿ ತಿಳಿಸಿದರು.
‘ಶಾಲೆಯಲ್ಲಿ ಪಾಠದೊಂದಿಗೆ ರಸಪ್ರಶ್ನೆ ಕಾರ್ಯಕ್ರಮ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮಗಳು ಪೂರಕವಾಗಿದೆ. ಮನೆಯಲ್ಲಿ ಸರಿಯಾಗಿ ಓದಲು ಗೊಂದಲ ಉಂಟಾಗುತ್ತದೆ ಎನ್ನುವ ಉದ್ದೇಶದಿಂದ ಶಾಲೆಯಲ್ಲಿ ವಾಸ್ತವ್ಯ ಹೂಡಿ ನಿರಂತರ ವಿದ್ಯಾಭ್ಯಾಸ ಕೈಗೊಂಡಿರುವುದು ರಾಜ್ಯಕ್ಕೆ ಪ್ರಥಮ ಬರಲು ಸಾಧ್ಯವಾಗಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *