Breaking News

ಸಾಕು ಪ್ರಾಣಿಗಳಿಗೆ ಹಿಂಸೆ: ಪ್ರಕರಣ ದಾಖಲು

ಕೋಟ:ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಹಿಂಭಾಗದ ಎನಿಮಲ್ ರೆಸ್ಕ್ಯೂ ಸೆಂಟರ್ ಎಂಬಲ್ಲಿ ಪ್ರಾಣಿಗಳನ್ನು ಅತ್ಯಂತ ಕಳಪೆ, ಅಮಾನವೀಯ ಮತ್ತು ಅಪಾಯಕಾರಿ ಪರಿಸ್ಥಿತಿಯಲ್ಲಿ ಇರಿಸಿದ ಸುಧೀಂದ್ರ ಐತಾಳ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.7ರಂದು ಪೇಟಾ ಇಂಡಿಯಾ ಸಂಸ್ಥೆಯ ಮಹೇಶ ಉಡುಪ ಎಂಬವರು ಸೆಂಟರ್‌ಗೆ ತೆರಳಿ ಪರಿಶೀಲಿಸಿದ್ದು, ಆಗ ಅಲ್ಲಿ ಸುಧೀಂದ್ರ ಐತಾಳ್, ಸಾಕು ಪ್ರಾಣಿಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸದೇ ಸಾಕು ಪ್ರಾಣಿಗಳಾದ ನಾಯಿಗಳು ಮತ್ತು ಬೆಕ್ಕುಗಳನ್ನು ಅತ್ಯಂತ ಚಿಕ್ಕ ಹಗ್ಗಗಳಿಂದ ಕಟ್ಟಿಹಾಕಿ ಸಾಕಿರುವುದು ಕಂಡುಬಂದಿದೆ. ಅಲ್ಲದೆ ಸ್ಥಳದಲ್ಲಿ ಒಂದು ದನದ ಕರುವಿನ ಮೃತದೇಹ ಪತ್ತೆಯಾಗಿದ್ದು ಈ ದನದ ಕರುವು ಸುಮಾರು ದಿನಗಳ ಹಿಂದೆ ಮೃತಪಟ್ಟಿರುವಂತೆ ಕಂಡುಬಂದಿದೆ. ಅದನ್ನು ತೆರವುಗೊಳಿಸದೆ ಕೊಳೆಯಲು ಬಿಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *