Breaking News

ಗಂಡನ ಸಾಲ ತೀರಿಸಲು ಒತ್ತಾಯ: ಮಗುವಿನ ಜತೆ ತಾಯಿ ಆತ್ಮಹತ್ಯೆ

ಬೆಳಗಾವಿ: ಇಲ್ಲಿನ ಪೀರನವಾಡಿಯಲ್ಲಿ ತನ್ನ ಮೂರು ವರ್ಷದ ಮಗನನ್ನು ಸೀರೆಯಿಂದ ನೇಣು ಬಿಗಿದು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಪೀರನವಾಡಿ ಪಾಟೀಲ ಗಲ್ಲಿಯ ಪ್ರೇಮಾ ನಾಗೇಶ ತಳವಾರ(28) ಹಾಗೂ ಪವನ್‌(3) ಮೃತರು. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ನಾಗೇಶ ತಳವಾರ ಜತೆಗೆ 6 ವರ್ಷಗಳ ಹಿಂದೆ ಪ್ರೇಮಾ ವಿವಾಹವಾಗಿತ್ತು. ಆರಂಭದಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದರು. ಅನಂತರ ನಾಗೇಶ ಉದ್ಯಮಬಾಗದಲ್ಲಿರುವ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದ. ಹೀಗಾಗಿ ಕುಟುಂಬ ಸಮೇತ ಪೀರನವಾಡಿಯಲ್ಲಿ ಬಂದು ನೆಲೆಸಿದ್ದರು. ವಿವಿಧ ಸಂಘಗಳಲ್ಲಿ ನಾಲ್ಕು ಲಕ್ಷ ರೂ. ಸಾಲ ಮಾಡಿದ್ದರು. ಈ ಹಣವನ್ನು ನಾಗೇಶನ ತಾಯಿ ಹಾಗೂ ಸಹೋದರ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದರು. ಹೀಗಾಗಿ ಆಗಾಗ ಸಾಲ ತೀರಿಸುವ ವಿಷಯದಲ್ಲಿ ಪ್ರೇಮಾಗೆ ಅತ್ತೆ ಹಾಗೂ ಮೈದುನ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *