Breaking News

ಕಂಡಕ್ಟರ್ ಬ್ಯಾಗ್ ನ್ನೇ ಎಗರಿಸಿದ ಮಹಿಳೆ: ದಮ್ಮಯ್ಯ ಎಂದರೂ ಬಿಡದ ಬಿಎಂಟಿಸಿ ಚಾಲಕ

ಬೆಂಗಳೂರು: ರಾಜಧಾನಿಯ ಬಿಎಂಟಿಸಿ ಬಸ್‌ಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಕಂಡಕ್ಟರ್ ಅವರ ಹಣ ಹಾಗೂ ಟಿಕೆಟ್‌ಗಳಿದ್ದ ಬ್ಯಾಗ್‌ ಕದಿಯಲು ಯತ್ನಿಸಿದ ಮಹಿಳೆಯೊಬ್ಬಳು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಕಿಕ್ಕಿರಿದು ತುಂಬಿದ್ದ ಬಸ್‌ನಲ್ಲಿ ಕಂಡಕ್ಟರ್ ಅವರ ಗಮನ ಬೇರೆಡೆ ಇದ್ದಾಗ ಮಹಿಳೆ ಬ್ಯಾಗ್‌ ಎಗರಿಸಲು ಯತ್ನಿಸಿದ್ದಾಳೆ. ಕಳ್ಳತನ ನಡೆಸಿ ಬಸ್‌ನಿಂದ ಪರಾರಿಯಾಗಲು ಮುಂದಾದ ವೇಳೆ ಕಂಡಕ್ಟರ್ ಹಾಗೂ ಪ್ರಯಾಣಿಕರ ಜಾಗರೂಕತೆಯಿಂದ ಮಹಿಳೆ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾಳೆ. ಬಳಿಕ ಸಾರ್ವಜನಿಕರು ಆಕೆಯನ್ನು ವಶಕ್ಕೆ ಪಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಸಾರ್ವಜನಿಕ ಸಾರಿಗೆಯ ಭದ್ರತೆ ಬಗ್ಗೆ ಮತ್ತೆ ಆತಂಕ ಮೂಡಿಸಿದ್ದು, ಬಸ್ ಸಿಬ್ಬಂದಿಯ ವಸ್ತುಗಳೇ ಸುರಕ್ಷಿತವಾಗಿಲ್ಲ ಎಂದರೆ ಸಾಮಾನ್ಯ ಪ್ರಯಾಣಿಕರ ಸ್ಥಿತಿ ಏನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *