ಬೀಜಿಂಗ್: ಈ ವಾರ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಸೈನ್ಯಕ್ಕೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ.
ತೈವಾನ್ – ಚೀನಾ ನಡುವೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್‌ನ ಬ್ರಿಗೇಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಸಿ ಈ ಸಲಹೆ ನೀಡಿದ್ದಾರೆ ಎಂದು ಆ ದೇಶದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಮಿಲಿಟರಿಯು ಸಮಗ್ರವಾಗಿ ತರಬೇತಿ ಮತ್ತು ಯುದ್ಧದ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಪಡೆಗಳು ಯಾವುದೇ ಸಂದರ್ಭದಲ್ಲಿ ಯುದ್ಧ ಸಾಮರ್ಥ್ಯ ಹೊಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಕ್ಸಿ ಸೂಚಿಸಿದರು ಎಂದು ವರದಿ ಮಾಡಿದೆ.
ತೈವಾನ್ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಚೀನಾ, ಇತ್ತೀಚಿನ ವರ್ಷಗಳಲ್ಲಿ ಸ್ವತಂತ್ರ ಆಡಳಿತ ಹೊಂದಿರುವ ಆ ದ್ವೀಪ ರಾಷ್ಟ್ರದ ಸುತ್ತಲೂ ತನ್ನ ಬಲ ಪ್ರದರ್ಶನವನ್ನು ಹೆಚ್ಚಿಸಿದೆ. ಇತ್ತೀಚೆಗೆ ಬೀಜಿಂಗ್ ತೈವಾನ್ ಅನ್ನು ಸುತ್ತುವರಿಯಲು ಫೈಟರ್ ಜೆಟ್‌ಗಳು, ಡ್ರೋನ್‌ಗಳು, ಯುದ್ಧನೌಕೆಗಳು ಮತ್ತು ಕೋಸ್ಟ್ ಗಾರ್ಡ್ ಹಡಗುಗಳನ್ನು ನಿಯೋಜಿಸಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

