ಹುಬ್ಬಳ್ಳಿ: ಸಿದ್ದರಾಮಯ್ಯನವರ ಮೇಲೆ ಎಫ್ ಐ ಆರ್ ಆಗಿದೆ. ಆದರೆ ಅರೆಸ್ಟ್ ಮಾಡುವ ವಿಷಯ ಲಾ ಎನ್ಫೋರ್ಸ್ಕೆಂಟ್ ಗೆ ಬಿಟ್ಟಿದ್ದು. ಆದರೆ ನಾವು ಕಾನೂನು ರೀತಿಯಲ್ಲಿ ಹಾಗೂ ಪಕ್ಷದಿಂದ ತಾರ್ಕಿಕ ಅಂತ್ಯದವರೆಗೂ ಹೋರಾಟ ಮಾಡುತ್ತೇವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೈ ಕೋರ್ಟ್ ಆದೇಶ ಬಂದ ಮೇಲೆಯೂ ಕೂಡ ಕುರ್ಚಿಗೆ ಅಂಟಿಕೊಂಡು ಕುಳಿತುಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಹೈ ಕಮಾಂಡ್ ವೈಫಲ್ಯವನ್ನು ಎತ್ತಿ ತೋರುತ್ತದೆ ಎಂದರು.
ಇನ್ನೂ ವಿಶೇಷ ಅಂದರೇ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಹೆದರುತ್ತದೆ. ರಾಹುಲ್ ಗಾಂಧಿಗೂ ಕೂಡ ಸಿದ್ದರಾಮಯ್ಯನವರ ಭಯವಿದೆ. ರಾಜೀನಾಮೆ ಕೊಡಲು ಹೇಳಿದರೇ ಇವರ ಹುಳುಕು ಹೊರಬರುತ್ತದೆ ಎಂಬುವಂತ ಭಯದಿಂದ ರಾಹುಲ್ ಗಾಂಧಿ ಕೂಡ ಸಿದ್ದರಾಮಯ್ಯನವರಿಗೆ ಹೆದರುತ್ತಾರೆ ಎಂದು ಅವರು ಟೀಕೆ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

