Breaking News

ಧಾರವಾಡದಲ್ಲಿ ಭೀಕರ ಅಗ್ನಿ ದುರಂತ – ಆಕಸ್ಮಿಕ ಬೆಂಕಿಗೆ ಕೊಟ್ಟಿಗೆ ಭಸ್ಮ, 12 ಜಾನುವಾರುಗಳು ಸಜೀವ ದಹನ!

ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಎರಡು ಕೊಟ್ಟಿಗೆಗಳು ಹೊತ್ತಿ ಉರಿದು 12 ಜಾನುವಾರುಗಳು ಸಜೀವ ದಹನಗೊಂಡಿವೆ. ಅವಘಡದಲ್ಲಿ ರೈತರಾದ ಸಾಗರ ಅಸುಂಡಿ ಹಾಗೂ ಧರಣೇಂದ್ರ ಅಸುಂಡಿಗೆ ಸೇರಿದ ಆಕಳು, ಎಮ್ಮೆ ಮತ್ತು ಕರುಗಳು ಮೃತಪಟ್ಟಿದ್ದು, ನಾಲ್ಕು ಲೋಡ್‌ ಹುಲ್ಲು ಹಾಗೂ ಎರಡು ಕೊಟ್ಟಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಸುದ್ದಿ ತಿಳಿದು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದು, ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *