ಹುಬ್ಬಳ್ಳಿ : ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಎಂದು ಅಭಿಯಾನ ಕೂಡ ಮಾಡಿದ್ದರು .

ಅದು ಕೇವಲ ನಾಮಕಾವಸ್ಥೆ ಮಾತ್ರ ಆಗಿದೆ . ಈ ನಗರದ ಪ್ರದೇಶವನ್ನು ನೋಡಿದ್ರ ಸ್ವಚ್ಛ ಭಾರತ ಮಾಯವಾಗಿದೆ . ಹೀಗೆ ರಸ್ತೆ ಮಧ್ಯದಲ್ಲೇ ಕಸದ ರಾಶಿ . ಒಂದು ಕಡೆ ಮಕ್ಕಳ ಆಟ ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು , ವಾಣಿಜ್ಯ ನಗರಿಯ ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್ ದಲ್ಲಿ . ಮೊದಲೇ ಸೋಂಕುಗಳು ಹೆಚ್ಚಾಗುತ್ತಿವೆ .
ಅಂತದರಲ್ಲಿ ಇಲ್ಲಿ ಕಸದ ವಿಲೇವಾರಿ ಮಾಡದೆ ಕಾರಣ ರಸ್ತೆ ತುಂಬ ಕಸದ ರಾಶಿ ಹರಡಿದೆ . ಇಲ್ಲಿನ ನಿವಾಸಿಗಳು ಈ ರಸ್ತೆಯಲ್ಲಿ ಮನೆಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ . ಈ ಸಮಸ್ಯೆ ಬಗ್ಗೆ ಪಾಲಿಕೆದವರಿಗೆ ಕರೆ ಮಾಡಿದರು ಯಾರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ . ಕೂಡಲೇ ಪಾಲಿಕೆ ಈ ಸ್ಥಳದಲ್ಲಿದ್ದ ಕಸವನ್ನು ದಿನಂಪ್ರತಿ ವಿಲೇವಾರಿ ಮಾಡಬೇಕಾಗಿದೆ

bigtvnews | Hubli Dharwad News | Kannada News | Karnataka News Hubli News | News In Hubli | Local news

