ಉತ್ತರ ಪ್ರದೇಶದ ಮೀರತ್‌ನಲ್ಲಿ ಹಾವಿನ ಕಡಿತದಿಂದ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ವ್ಯಕ್ತಿಯ ಸಾವಿನ ಪ್ರಕರಣವು ಪೊಲೀಸರ ತನಿಖೆಯಲ್ಲಿ ಕೊಲೆ ಎಂಬುದು ಬಹಿರಂಗವಾಗಿದೆ. ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಿಸಿರುವ ಆರೋಪ ಕೇಳಿಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಗೆ ಶಾಲಾ ವಾಹನ ಚಾಲಕನೊಂದಿಗೆ ಅಕ್ರಮ ಸಂಬಂಧವಿದ್ದು, ಪತಿ ಅಡ್ಡಿಯಾಗಿದ್ದರಿಂದ ಕೊಲೆ ಸಂಚು ರೂಪಿಸಲಾಗಿತ್ತು. ಈ ಹಿಂದೆ ಎರಡು ಬಾರಿ ಯತ್ನಿಸಿ ವಿಫಲವಾದ ಆರೋಪಿಗಳು, ಮೂರನೇ ಬಾರಿ ವಿಷಪೂರಿತ ಹಾವನ್ನು ಬಳಸಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರ ಅನುಮಾನದಿಂದ ನಡೆದ ತನಿಖೆಯಲ್ಲಿ ಸಂಚು ಬಯಲಾಗಿದ್ದು, ಮಹಿಳೆ, ಆಕೆಯ ಪ್ರಿಯಕರ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

