Breaking News

ಫ್ರೆಂಡ್​ಶಿಪ್​ ಕ್ಲಬ್​ ಹೆಸರಲ್ಲಿ ಆನ್​ಲೈನ್​ ವಂಚನೆ

ಉಡುಪಿ: ಫ್ರೆಂಡ್​ಶಿಪ್​ ಕ್ಲಬ್​ ಸದಸ್ಯತ್ವ ಪಡೆಯುವ ಆಸೆಗೆ ಬಿದ್ದ ವೃದ್ಧರೊಬ್ಬರು ಸೈಬರ್​ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 5,11,882 ರೂ. ಕಳೆದುಕೊಂಡಿರುವ ಘಟನೆ ಕಡಿಯಾಳಿಯಲ್ಲಿ ನಡೆದಿದೆ. ಕಡಿಯಾಳಿ ನಿವಾಸಿ ಉಸ್ಮಾನ್​ ಸಾಹೇಬ್​ (66) ವಂಚನೆಗೊಳಗಾದವರು. ಇವರು ತಮ್ಮ ಎಸ್​ಬಿ ಖಾತೆಯಿಂದ ಜೂನ್​ 27 ರಿಂದ ಜುಲೈ 14ರ ಅವಧಿಯಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿದ್ದರು. ಜೂನ್​ 27 ರಂದು 29,000 ರೂ., ಜುಲೈ 9 ರಂದು ಒಂದೇ ದಿನ ಮೂರು ಬಾರಿ 84,882 ರೂ., 99,000 ರೂ. ಹಾಗೂ 99,000 ರೂ. ಮತ್ತು ಜುಲೈ 14 ರಂದು 2,00,000 ರೂ. ಹಣವನ್ನು ಗೂಗಲ್​ ಪೇ, ಕ್ಯೂಆರ್​ ಕೋಡ್​ ಸ್ಕಾ$ನರ್​ ಹಾಗೂ ಬ್ಯಾಂಕ್​ ಖಾತೆಗಳ ಮೂಲಕ ಸೈಬರ್​ ವಂಚಕರು ಸೂಚಿಸಿದ ಖಾತೆಗಳಿಗೆ ಕಳುಹಿಸಿದ್ದರು. ನಂತರ ಆನ್​ಲೈನ್​ ವಂಚನೆಗೆ ಒಳಗಾಗಿರುವುದನ್ನು ಅರಿತ ಅವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *