ಬೆಳಗಾವಿಯಲ್ಲಿ ಇನ್ಶೂರೆನ್ಸ್ ಹಣ ಪಡೆದು ಸಾಲ ತೀರಿಸುವ ಉದ್ದೇಶದಿಂದ ಸ್ವಂತ ಚಿನ್ನದಂಗಡಿಯಲ್ಲೇ ಕಳ್ಳತನದ ನಾಟಕವಾಡಿದ್ದ ಜ್ಯುವೆಲ್ಲರಿ ಅಂಗಡಿ ಮಾಲೀಕ ಕೃಷ್ಣಾನಂದ ವೇರ್ಣೇಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿಯಲ್ಲಿ ಕಳ್ಳತನವಾಗಿದೆ ಎಂದು ಮಾಲೀಕನೇ ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಆದರೆ ತನಿಖೆ ವೇಳೆ ಕಳ್ಳರು ನುಗ್ಗಿದ ಯಾವುದೇ ಕುರುಹುಗಳು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದು, ಮಾಲೀಕನೇ ಆಭರಣಗಳನ್ನು ರಹಸ್ಯವಾಗಿ ಹೊರಸಾಗಿಸಿರುವುದು ಬೆಳಕಿಗೆ ಬಂದಿದೆ. ಕಟ್ಟುನಿಟ್ಟಿನ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆತನಿಂದ ಸುಮಾರು ₹65.95 ಲಕ್ಷ ಮೌಲ್ಯದ 519 ಗ್ರಾಂ ಚಿನ್ನ, ಬೆಳ್ಳಿ ಹಾಗೂ ನಗದನ್ನು ವಶಪಡಿಸಿಕೊಂಡು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

