ಬೆಳಗಾವಿ ಜಿಲ್ಲೆಯ 9 ಕಾರ್ಖಾನೆಗಳಿಗೆ ಮುಟ್ಟುಗೋಲು ಹಾಕುವಂತೆ ಜಿಲ್ಲಾದಿಕಾರಿ ಎಸ್ ಬಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಪ್ರಸಕ್ತ ಹಂಗಾಮಿನ ಎಪ್ ಆರ್ ಪಿ ಧರ ವಿಲ್ ಪಾವತಿಸದ ಜಿಲ್ಲೆಯ 9 ಸಕ್ಕರೆ ಖಾರ್ಕಾನೆಗಳಿಗೆ ಆಯಾ ತಹಶಿಲ್ದಾರಗಳಿಗೆ ಸಕ್ಕರೆ ಕಾರ್ಖಾನೆಯನ್ನು ಮುಟ್ಟುಗೋಲಿಗೆ ಸೂಚನೆ ನೀಡಿದ್ದಾರೆ. ಖಾನಾಪೂರದ ಬಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ 3240 ಲಕ್ಷ ಬಾಕಿ, ಮುನವಳ್ಳಿಯ ರೇಣುಕಾ ಶುಗರ್ಸ್ 4507 ಲಕ್ಷ ಬಾಕಿ, ಕೊಳವಿಯ ಗೋಕಾಕ್ ಶುಗರ್ಸ 2240 ಲಕ್ಷ ಬಾಕಿ, ಬೈಲಹೊಂಗಲದ ಸೋಮೆಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ 1191 ಲಕ್ಷ ಬಾಕಿ, ಬೆಲ್ಲದ ಬಾಗೆವಾಡಿಯ ಉಮೇಶ್ ಕತ್ತಿ ಮಾಲಿಕತ್ವದ ವಿಶ್ವರಾಜ ಶುಗರ್ಸ 3300 ಲಕ್ಷ, ಅಥಣಿಯ ಶ್ರಿಮಂತ ಪಾಟೀಲ್ ಮಾಲಿಕತ್ವದ ಅಥಣಿ ಶುಗರ್ಸ, 6460 ಲಕ್ಷ ಬಾಕಿ, ಕೃಷ್ಣಾ ಶುಗರ್ಸ 1715 ಲಕ್ಷ ಬಾಕಿ, ಉಗಾರ ಶುಗರ್ಸ, 10252 ಲಕ್ಷ ಬಾಕಿ, ಉಳಿಸಿಕ್ಕೊಂಡಿವೆ, ಬೆಳಗಾವಿ ಜಿಲ್ಲೆಯಲ್ಲಿ 35071 ಲಕ್ಷ ಹಣವನ್ನ ಬಾಕಿ ಉಳಿಸಿಕೊಂಡಿವೆ. ಹಾಗೂ ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಯೂ ಸಹ 2165 ಲಕ್ಷ ಬಾಕಿ ಉಳಿಸಿಕೊಂಡಿದೆ. ಇದರ ಹಿನ್ನೆಲೆಯಲ್ಲಿ ಭೂ ಕಂದಾಯ ಕಾಯ್ದೆಯ ಅಡಿಯಲ್ಲಿ ಕ್ರಮ ಜರುಗಿಸುವಂತೆ ಜೂನ್ 15 ರಂದು ತಹಶಿಲ್ದಾರಗಳಿಗೆ ಡಿ ಸಿ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





