ಟ್ರಾಫಿಕ್ ಪೊಲೀಸರು ಜಾಕೆಟ್ ಹಿಂದೆ ಹುದ್ದೆ ಮರೆಮಾಚುತ್ತಿದ್ದಾರಾ..? ವಾಹನ ತಪಾಸಣೆ ವೇಳೆ ಗುರುತು ಕಾಣದಿದ್ದರೆ ಜನ ಪ್ರಶ್ನಿಸೋದು ತಪ್ಪಾ..?
ಜಾಕೆಟ್ ಹಿಂದೆ ಮರೆಮಾಚಿದ ಹುದ್ದೆ..! ವಾಹನ ತಪಾಸಣೆ ವೇಳೆ ಪೊಲೀಸ್ ಯಾರೆಂದು ಜನರಿಗೆ ತಿಳಿಯಬಾರದಾ..?
ಹುಬ್ಬಳ್ಳಿ-ಧಾರವಾಡದಲ್ಲಿ ವಾಹನ ತಪಾಸಣೆ ವೇಳೆ ಹಲವು ಟ್ರಾಫಿಕ್ ಪೊಲೀಸರು ಸಮವಸ್ತ್ರದ ಮೇಲೆಯೇ ಜಾಕೆಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಪ್ರಶ್ನೆಗೆ ಕಾರಣವಾಗಿದೆ. ಜಾಕೆಟ್‌ನಿಂದ ಹೆಸರು, ಹುದ್ದೆ ಹಾಗೂ ಗುರುತು ಕಾಣದಿರುವುದರಿಂದ ಪಾರದರ್ಶಕತೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ….

ವಾಹನ ತಪಾಸಣೆ ನಡೆಸುವ ಪೊಲೀಸ್ ಅಧಿಕಾರಿ ಯಾರು.? ಅವರ ಹುದ್ದೆ ಏನು..? ಎಂಬ ಮಾಹಿತಿ ಸಾರ್ವಜನಿಕರಿಗೆ ತಿಳಿಯುವ ಹಕ್ಕು ಇದೆ ಎಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ. ಸಮವಸ್ತ್ರದ ಮೇಲಿನ ಗುರುತುಗಳನ್ನು ಮರೆಮಾಚುವ ರೀತಿಯಲ್ಲಿ ಜಾಕೆಟ್ ಧರಿಸುವುದು ಇಲಾಖೆಯ ನಿಯಮಗಳಿಗೆ ಅನುಗುಣವೇ ಎಂಬ ಚರ್ಚೆಯೂ ನಡೆಯುತ್ತಿದೆ…
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯವಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಅಥವಾ ಇದೇ ಪದ್ಧತಿ ಮುಂದುವರಿಯುತ್ತದೆಯೇ ಎಂಬುದು ಕಾದು ನೋಡಬೇಕಿದೆ….
bigtvnews | Hubli Dharwad News | Kannada News | Karnataka News Hubli News | News In Hubli | Local news

