ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆಯಿಂದ ತಮಿಳುನಾಡಿನ ಹೊಸೂರು ವರೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ-207 ನಿರ್ಮಾಣಕ್ಕೆ ಭೂಮಿ ನೀಡಿದ ರೈತರು ಓಡಾಡಲು ರಸ್ತೆ ಇಲ್ಲದೆ ದಿಕ್ಕು ತೋಚದಂತಾಗಿದೆ.ದಾಬಸ್‌ಪೇಟೆಯಿಂದ ಹೊಸೂರು ವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಉದ್ದ ಒಟ್ಟು 139 ಕಿಲೋಮೀಟರ್. ಇದರಲ್ಲಿ ಸುಮಾರು 122 ಕಿಲೋಮೀಟರ್ ರಾಜ್ಯದಲ್ಲೇ ಹಾದು ಹೋಗುತ್ತದೆ. ಹೆದ್ದಾರಿಯಿಂದ ರಾಜ್ಯದ ಸಾರಿಗೆ ಸಂಪರ್ಕಕ್ಕೆ ವೇಗ ಸಿಗುತ್ತದೆ. ಆದರೆ ಸ್ಥಳೀಯರಿಗೆ ಅನುಕೂಲ ಆಗುವಂತ ಸರ್ವಿಸ್ ರಸ್ತೆ ನಿರ್ಮಿಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.ರೈತರ ಅನುಕೂಲಕ್ಕಾಗಿ ಸರ್ವೀಸ್ ರಸ್ತೆ ನಿರ್ಮಿಸಬೇಕೆಂದು ಸಂಸದ ಶಾಸಕ ಕೇಂದ್ರ ಹೆದ್ದಾರಿ ಮಂತ್ರಿಗಳ ಆದಿಯಾಗಿ ಎಲ್ಲರನ್ನೂ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

